ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ರೈತ ಮಹಿಳೆಯರಿಗೆ ಉಚಿತವಾಗಿ ಹಸು ವಿತರಣೆ

Published 7 ಮೇ 2024, 6:43 IST
Last Updated 7 ಮೇ 2024, 6:43 IST
ಅಕ್ಷರ ಗಾತ್ರ

ಮಾಗಡಿ: ರೋಟರಿ ಹೈಗ್ರೌಂಡ್ಸ್‌, ರೋಟರಿ ಮಾಗಡಿ ಸೆಂಟ್ರಲ್‌, ಗ್ಲೋಬಲ್‌ ಗ್ರಾಂಟ್‌ ಅಡಿಯಲ್ಲಿ ಶುಕ್ರವಾರ ಸೀಗೆಕುಪ್ಪೆ ಗ್ರಾಮದ 8 ಮಹಿಳೆಯರಿಗೆ ಉಚಿತವಾಗಿ 8 ಸೀಮೆಹಸುಗಳನ್ನು ವಿತರಿಸಲಾಯಿತು.

ಸೀಗೇಕುಪ್ಪೆ ಗ್ರಾಮದ ರೈತ ಮಹಿಳೆಯರಾದ ಲಕ್ಷ್ಮಮ್ಮ, ಶಿವಮ್ಮ, ಅಬಿರಾ ಖಾನಂ, ತಿಮ್ಮಮ್ಮ, ಶಿವಮ್ಮ,ಪ್ರೇಮ, ಶಿವಮ್ಮ, ಶಿವಮ್ಮ ಅವರಿಗೆ ಉಚಿತವಾಗಿ ಹಸುಗಳನ್ನು ವಿತರಿಸಲಾಯಿತು.

ರೋಟರಿ ಹೈಗ್ರೌಂಡ್ಸ್‌ನ ಡಾ.ಪ್ರಕಾಶ್‌ ಕುಮಾರ್‌ ಮಾತನಾಡಿ, ರೈತ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕಾಮಧೇನುಯೋಜನೆಗೆ ಒತ್ತು ನೀಡಿ ಹಸುಗಳನ್ನು ವಿತರಿಸಿದ್ದೇವೆ ಎಂದರು.

ರೋಟರಿ ಮಾಗಡಿ ಸೆಂಟ್ರಲ್‌ ಅಧ್ಯಕ್ಷ ಪ್ರಭಾಕರ್‌ ಎಲ್‌. ಮಾತನಾಡಿ, ರೋಟರಿಗೆ ರಾಜಕೀಯದ ಅಗತ್ಯವಿಲ್ಲ. ಗರ್ಭ ಧರಿಸಿರುವ ಹಸುಗಳನ್ನು ವಿತರಿಸಿದ್ದೇವೆ ಎಂದರು.

ಪ್ರೊ.ಕೆ.ಸಿ.ಜಯರಾಮ್‌ ಮಾತನಾಡಿ, ಕಾಮಧೇನು ಪ್ರಾಜೆಕ್ಟರ್‌ ಅಡಿಯಲ್ಲಿ ತಲಾ ₹ 50 ಸಾವಿರ ಮೌಲ್ಯದ ಒಟ್ಟು 44 ಹಸುಗಳನ್ನು ವಿತರಿಸಿದ್ದೇವೆ. 4 ವರ್ಷಗಳ ಹಿಂದೆ 4 ಹಳ್ಳಿಗಳ ರೈತ ಮಹಿಳೆಯರಿಗೆ 40 ಹಸುಗಳನ್ನು ವಿತರಿಸಿದ್ದೇವೆ ಇಂದು 100 ಹಸುಗಳಾಗಿವೆ. ಹಸು ಸಾಕಿ ಹಣ ಗಳಿಸಿ ಮನೆಯ ಸುಸ್ಥಿತಿಗೆ ಶ್ರಮಿಸಿ. ಹಳ್ಳಿಗಳ ರಾಜಕೀಯದ ಕಡೆ ಗಮನಿಸಬೇಡಿ. ಬಡವರನ್ನು ಗುರುತಿಸಿ ಅವರಿಗೆ ನೆರವು ನೀಡೋಣ’ ಎಂದರು.

ಪಶು ವೈದ್ಯರಾದ ಡಾ.ಮಲ್ಲಿನಾಥ, ಡಾ.ಲೋಕೇಶ್‌ ಪಶುಪಾಲನೆ ವಿಧಾನಗಳನ್ನು ವಿವರಿಸಿದರು. ಟಿಎಪಿಸಿಎಂಎಸ್‌ ಅಧ್ಯಕ್ಷ ಸೋಮಶೇಖರ್‌, ರೋಟರಿ ಕಾರ್ಯದರ್ಶಿ ಶಂಕರ್‌ ಮೂರ್ತಿ, ಗಣೇಶ್‌, ದಕ್ಷಿಣಾಮೂರ್ತಿ, ಡಾ.ಮಂಜುನಾಥ ಬೆಟಗೇರಿ, ಪೈಲ್ವಾನ್‌ ಸುಲ್ತಾನ್‌ ಬಾಬಾ, ಕೆಂಪೇಗೌಡ, ವೇಣುಗೋಪಾಲ್‌, ವಿನೋದ್‌, ನರಸಿಂಹಮೂರ್ತಿ, ಚೇತನ್‌, ಸುಧೀಂದ್ರ ಹಾಗೂ ರೋಟರಿ ಪದಾಧಿಕಾರಿಗಳು ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT