ಮಾಗಡಿ: ತಾಲ್ಲೂಕಿನ ಚಕ್ರಬಾವಿ ಕಾಲೊನಿ ರಸ್ತೆ ಕಾಮಗಾರಿ ವಿಳಂಬದಿಂದಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಕೆಸರು ರಸ್ತೆಗೆ ಭಾನುವಾರ ರಾಗಿ ಪೈರು ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

₹1.30 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ವತಿಯಿಂದ ಅನುದಾನ ಬಿಡುಗಡೆಯಾಗಿದ್ದು ಚಕ್ರಬಾವಿ ಪರಿಶಿಷ್ಟ ಜಾತಿ/ ಪಂಗಡ ಕಾಲೊನಿ ಗಣಪತಿ ದೇವಸ್ಥಾನದಿಂದ ಅರಳಕುಪ್ಪೆಗೆ ತೆರಳುವ ಮುಖ್ಯರಸ್ತೆ 150 ಮೀಟರ್ ರಸ್ತೆ ಕಾಮಗಾರಿಗಾಗಿ ಹಲವು ದಿನಗಳ ಹಿಂದೆ ರಸ್ತೆಯನ್ನು ಅಗೆಯಲಾಗಿತ್ತು. ಎರಡು ಬದಿಯಲ್ಲೂ ಚರಂಡಿ ನಿರ್ಮಾಣ ಆಗದೆ ಮನೆ ಕೊಳಚೆ ನೀರು, ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಕೆಸರು ರಸ್ತೆಯಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಎರಡು ಬದಿಯಲ್ಲೂ ಚರಂಡಿ ನಿರ್ಮಾಣ ಆಗಿಲ್ಲ. ಜನರು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡಲು ತೊಂದರೆಪಡುತ್ತಿದ್ದು ವೃದ್ಧರು ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ ಎಂದು ಗ್ರಾಮಸ್ಥರಾದ ಅಂಗಡಿ ಸುರೇಶ್, ಗಿರೀಶ್, ಪಾಪೇಗೌಡ, ರವಿ, ಶ್ರೀನಿವಾಸ್, ಚೇತನ್, ದೇವರಾಜ್, ಅಭಿ, ರವಿ, ಪಟೇಲ್ ಸುರೇಶ್, ಗಂಗಾಧರಯ್ಯ, ಚಂದ್ರು, ಮಂಜಕ್ಕ, ಜಯಮ್ಮ, ಲಕ್ಷ್ಮಕ್ಕ ಸೇರಿದಂತೆ ಇತರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.