ಉದ್ಯೋಗ ತೊರೆದು ರೈತನಾದ: ಸಮಗ್ರ ಕೃಷಿ ಮೂಲಕ ಮಾದರಿಯಾದ ಮರೀಕುಪ್ಪೆ ಗ್ರಾಮದ ಯುವಕ
ಸುಧೀಂದ್ರ ಸಿ.ಕೆ.
Published : 12 ಅಕ್ಟೋಬರ್ 2025, 2:36 IST
Last Updated : 12 ಅಕ್ಟೋಬರ್ 2025, 2:36 IST
ಫಾಲೋ ಮಾಡಿ
Comments
ಕುಂಬಳಕಾಯಿ ಬೆಳೆ ವೀಕ್ಷಿಸುತ್ತಿರುವ ಕೃಷಿ ವಿಜ್ಞಾನಿಗಳು
ಗೆಣಸು ಬೆಳೆ ಜತೆ ಯುವ ರೈತ ಚಂದ್ರಶೇಖರ್
ಆಧುನಿಕ ಬೇಸಾಯದ ಮೂಲಕ ಯುವಕರು ಕೃಷಿಯಲ್ಲೂ ಉತ್ತಮ ಲಾಭ ಗಳಿಸಬಹುದು ಎಂಬುದಕ್ಕೆ ಯುವ ರೈತ ಚಂದ್ರಶೇಖರ್ ಮಾದರಿಯಾಗಿದ್ದಾರೆ. 3.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ
ಡಾ. ದೀಪಾ ಪೂಜಾರ ತೋಟಗಾರಿಕೆ ಕೃಷಿ ವಿಜ್ಞಾನ ಕೇಂದ್ರ ಮಾಗಡಿ
ರಾಸಾಯನಿಕ ಗೊಬ್ಬರ ಬಳಕೆ ಇಲ್ಲ
ಕೃಷಿ ಪೂರಕ ಉಪ ಕಸುಬುಗಳಾದ ಹೈನುಗಾರಿಕೆ ಮಣ್ಣು ಮತ್ತು ನೀರು ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಸಮಪಾತಿ ಬದುಗಳ ನಿರ್ಮಾಣ ಮಾಗಿ ಉಳುಮೆ ಇಳಿಜಾರಿಗೆ ಅಡ್ಡವಾಗಿ ಬದುಗಳ ನಿರ್ಮಾಣ ಬದುಗಳ ಮಧ್ಯೆ ಮಟ್ಟ ಮಾಡುತ್ತಿದ್ದಾರೆ. ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರಿಸಿರುವ ಇವರು ಮಣ್ಣಿನ ಫಲವತ್ತತೆಗಾಗಿ ಕೋಳಿ ಗೊಬ್ಬರ ಕಾಂಪೋಸ್ಟ್ ಗೊಬ್ಬರ ಕೊಟ್ಟಿಗೆಗೊಬ್ಬರ ಬೇವಿನ ಹಿಂಡಿ ಹೊಂಗೆ ಹಿಂಡಿ ಮೀನಿನ ಎಣ್ಣೆ ಜೀವಾಮೃತ ಮಾಡಿ ತೋಟಕ್ಕೆ ಉಪಯೋಗಿಸುತ್ತಿದ್ದಾರೆ. ಭೂಮಿಯ ಸಮರ್ಪಕ ಬಳಕೆಗಾಗಿ ಹಾಗೂ ಅಭಿವೃದ್ಧಿಗಾಗಿ ಮಿಶ್ರ ಬೆಳೆ ಅಂತರಬೆಳೆ ಮೇವಿನ ಬೆಳೆ ತೆಗೆಯುುತ್ತಿದ್ದಾರೆ.