ಹವಾಮಾನ ವೈಪರೀತ್ಯದಿಂದಾಗಿ ಹಳದಿ ಮತ್ತು ಕಂದು ಬಣ್ಣಕ್ಕೆ ತಿರುಗಿ ಕೊಳೆತಿದ್ದ ಮಾವು
ಮಾವು ವಿಮೆಯು ಬೆಳೆಗಾರರಿಗೆ ಆಶಾಕಿರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ನಾಲ್ಕು ಎಕರೆಯಲ್ಲಿ ನಾವು ಬೆಳೆದಿದ್ದ ಮಾವು ಸಂಪೂರ್ಣವಾಗಿ ನೆಲ ಕೆಚ್ಚಿತ್ತು. ವಿಮೆ ಮಾಡಿಸಿದ್ದರಿಂದ ₹1.08 ಲಕ್ಷ ಮೊತ್ತ ಸಿಕ್ಕಿತು
ಮುಕುಂದ ರಾವ್ ಮಾವು ಬೆಳೆಗಾರ ಚೋಳಮಾರನಹಳ್ಳಿ ಚನ್ನಪಟ್ಟಣ ತಾಲ್ಲೂಕು
ಹದಿನಾರು ಎಕರೆಯಲ್ಲಿ ಮಾವು ಬೆಳೆದಿದ್ದ ನನಗೆ ಎಕರೆಗೆ ₹16 ಸಾವಿರದಂತೆ ಒಟ್ಟು ₹2.56 ಲಕ್ಷ ವಿಮೆ ಮೊತ್ತ ಸಿಕ್ಕಿದೆ. ಸತತ ಐದು ವರ್ಷಗಳಿಂದ ವಿಮೆ ಮಾಡಿಸುತ್ತಾ ಬಂದಿದ್ದು ಮಾವು ವಿಮೆಯು ಬೆಳೆಗಾರರಿಗೆ ಜೀವದಾನವಾಗಿದೆ