ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಜಿಲ್ಲೆಯ 3,321 ಮಂದಿ ಎಂಜಿನಿಯರಿಂಗ್‌ಗೆ ಅರ್ಹ

ಸಿಇಟಿ ಫಲಿತಾಂಶ ಪ್ರಕಟ; ಪರೀಕ್ಷೆ ಎದುರಿಸಿದ್ದ 3,520 ವಿದ್ಯಾರ್ಥಿಗಳು
Published 3 ಜೂನ್ 2024, 3:14 IST
Last Updated 3 ಜೂನ್ 2024, 3:14 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ರಾಮನಗರ: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಏಪ್ರಿಲ್‌ನಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಜಿಲ್ಲೆಯ 3,321 ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ಪ್ರಾಧಿಕಾರವು ಕಳೆದ ಏಪ್ರಿಲ್‌ 18 ಹಾಗೂ 19ರಂದು ಏಳು ವೃತ್ತಿಪರ ಕೋರ್ಸ್‌ಗಳಿಗೆ ಪರೀಕ್ಷೆ ನಡೆಸಿತ್ತು. ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 3,619 ವಿದ್ಯಾರ್ಥಿಗಳ ಪೈಕಿ 3,520 ಮಂದಿ ಪರೀಕ್ಷೆ ಎದುರಿಸಿದ್ದರು. ರಾಮನಗರ ಮತ್ತು ಚನ್ನಪಟ್ಟಣ ಸೇರಿ ಒಟ್ಟು 6 ಕೇಂದ್ರಗಳಲ್ಲಿ ನಡೆದ ಪರೀಕ್ಷೆ ನಡೆದಿತ್ತು.

ಫಲಿತಾಂಶದ ಪೈಕಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಪದವಿಗೆ (ಬಿಎನ್‌ವೈಎಸ್) 2.867 (ಶೇ 81.45) ಮಂದಿ ಅರ್ಹತೆ ಗಿಟ್ಟಿಸಿದ್ದಾರೆ. ಬಿ.ಎಸ್ಸಿ (ಕೃಷಿ)ಗೆ 2,844 (ಶೇ 80.80) ಮಂದಿ, ಬಿವಿ.ಎಸ್ಸಿಗೆ (ಪಶು ಸಂಗೋಪನೆ) 2,873 (ಶೇ 81.62), ಬಿ.ಫಾರ್ಮಸಿಗೆ 3,350 (ಶೇ 95.17), ಡಿ.ಫಾರ್ಮಸಿಗೆ 3,351 (ಶೇ 95.20) ಹಾಗೂ ಬಿ.ಎಸ್ಸಿ (ನರ್ಸಿಂಗ್)ಗೆ 2,874 (ಶೇ 81.65) ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶವನ್ನು ಅವಲೋಕಿಸಿದಾಗ ಡಿ.ಫಾರ್ಮಾ ಕೋರ್ಸ್‌ಗೆ ಅತಿ ಹೆಚ್ಚು ಅರ್ಹತೆ ಮತ್ತು ಬಿ.ಎಸ್ಸಿ (ಕೃಷಿ)ಗೆ ಅತಿ ಕಡಿಮೆ ಅರ್ಹತೆ ಗಳಿಸಿದ್ದಾರೆ. ವಿವಿಧ ಕೋರ್ಸ್‌ಗಳಿಗೆ ಅರ್ಹರಾದವರ ಪಟ್ಟಿಯನ್ನು ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟ್‌ http://kea.kar.nic.in ನಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT