ಸೋಮವಾರ, ಅಕ್ಟೋಬರ್ 26, 2020
21 °C

ಒಂದೇ ದಿನ 161 ಪ್ರಕರಣ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 161 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿದೆ.

ಚನ್ನಪಟ್ಟಣ 53, ಕನಕಪುರ 40, ಮಾಗಡಿ 22 ಮತ್ತು ರಾಮನಗರ 46 ಪ್ರಕರಣಗಳು ಇದರಲ್ಲಿ ಸೇರಿವೆ. ಈ ಪೈಕಿ ಚನ್ನಪಟ್ಟಣ 1188, ಕನಕಪುರ 999, ಮಾಗಡಿ 760 ಮತ್ತು ರಾಮನಗರ 1984 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 52 ಮಂದಿ ಸೋಂಕಿನಿಂದ ನಿಧನರಾಗಿದ್ದಾರೆ.

ಗುಣಮುಖ: ಚನ್ನಪಟ್ಟಣ ತಾಲ್ಲೂಕಿನಲ್ಲಿ 25, ಕನಕಪುರ ತಾಲ್ಲೂಕಿನಲ್ಲಿ 18, ಮಾಗಡಿ ತಾಲ್ಲೂಕಿನಲ್ಲಿ 27 ಹಾಗೂ ರಾಮನಗರ ತಾಲ್ಲೂಕಿನಲ್ಲಿ 26 ಜನ ಸೇರಿ ಒಟ್ಟಾರೆ 96 ಜನರು ಶುಕ್ರವಾರ ಗುಣಮುಖರಾಗಿದ್ದು, ಕೋವಿಡ್‌ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 3985 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 948, ಕನಕಪುರ 800, ಮಾಗಡಿ 552 ಮತ್ತು ರಾಮನಗರ 1685 ಜನರು ಸೇರಿದ್ದಾರೆ. ಇನ್ನೂ 894 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.