ಶನಿವಾರ, ಜನವರಿ 16, 2021
28 °C

‘ಕಿಂದರಜೋಗಿ’ಗೆ ಹೊಸ ರೂಪ!

ಎಚ್.ಎಂ. ರಮೇಶ್ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕೃತಿ`ಬೊಮ್ಮನಹಳ್ಳಿ ಕಿಂದರಿಜೋಗಿ' ಕವನ ಸಂಕಲನ ಹೊಸ ವೇಷದಲ್ಲಿ ಹೊರಬಂದಿದೆ. 

ಪಟ್ಟಣದ ಸೇಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಆರ್.ವಿ.ಅಚಲ, ಕಿರುಬೆರಳಿನಲ್ಲಿ ಎತ್ತಿ ಹಿಡಿಯಬಹುದಾದಷ್ಟು ಚಿಕ್ಕ ಗಾತ್ರದಲ್ಲಿ ಕಿಂದರಜೋಗಿ ಕವನ ಸಂಕಲನವನ್ನು ಹೊರತಂದಿದ್ದಾಳೆ. ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ವಿಶೇಷವಾಗಿ ಕೇವಲ 1 ಸೆಂ.ಮೀ x 1 ಸೆಂ.ಮೀ. ಅಳತೆಯಲ್ಲಿ `ಬೊಮ್ಮನಹಳ್ಳಿ ಕಿಂದರಿಜೋಗಿ' ಕವನ ಸಂಕಲನವನ್ನು ಕೈಯಿಂದ ಬರೆದಿದ್ದಾಳೆ.

28 ದೊಡ್ಡ ಪುಟದಲ್ಲಿದ್ದ 4229 ಅಕ್ಷರಗಳನ್ನು 32 ಪುಟ್ಟ ಪುಟದಲ್ಲಿ ಕೇವಲ 12 ಗಂಟೆಗಳ ಅವಧಿಯಲ್ಲಿ  ಪೆನ್ಸಿಲ್ನಲ್ಲಿ ಬರೆದಿದ್ದಾಳೆ. ಈ ಪುಸ್ತಕದ ತೂಕ ಕೇವಲ 0.210 ಮಿಲಿ ಗ್ರಾಂ.

ತಾಲ್ಲೂಕಿನ ರಾಂಪುರ ಗ್ರಾಮದ ಅಚಲ, ಸರ್ಕಾರ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಓದುವ ಬೆಳಕು ಯೋಜನೆಯ ಅಭಿಯಾನ ಕೈಗೊಂಡಿದ್ದಾಳೆ.

ಈಕೆಯ ತಂದೆ ವಿಜಯ್ ರಾಂಪುರ ಸಹ ಪೋಸ್ಟ್ ಕಾರ್ಡ್ ನ ಒಂದು ಬದಿಯಲ್ಲಿ `ಇಂಡಿಯಾ' ಎಂದು 59,325 ಆಂಗ್ಲ ಪದಗಳನ್ನು ಬರೆದು ದಾಖಲೆ ನಿರ್ಮಿಸಿದ್ದರು. ಇದು ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು