ಸೋಮವಾರ, ಫೆಬ್ರವರಿ 17, 2020
18 °C
ಶೀಘ್ರದಲ್ಲೇ ಜ್ಯೋತಿಷಿಗಳಿಂದಲೂ ಪರಿಶೀಲನೆ

ಏಪ್ರಿಲ್‌ 17ರಂದು ನಿಖಿಲ್‌ ವಿವಾಹ: ಜಾನಪದ ಲೋಕದ ಬಳಿ ಸ್ಥಳ ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಹಾಗೂ ರೇವತಿ ವಿವಾಹ ಏಪ್ರಿಲ್‌ 17ರಂದು ಇಲ್ಲಿನ ಜಾನಪದ ಲೋಕದ ಸಮೀಪ ಜಮೀನಿನಲ್ಲಿ ನಡೆಯಲಿದೆ.

ಈ ಪ್ರದೇಶ ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿ ಇದ್ದು, ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಇಲ್ಲಿಯೇ ಸೆಟ್‌ ಹಾಕಿ ವಿವಾಹ ನೆರವೇರಿಸಲು ನಿಶ್ಚಯಿಸಲಾಗಿದೆ. ಮದುವೆಗಾಗಿ ಗೊತ್ತು ಮಾಡಲಾದ 54 ಎಕರೆ ಪ್ರದೇಶವನ್ನು ಕುಮಾರಸ್ವಾಮಿ ತಮ್ಮ ಬೀಗರಾದ ಮಂಜುನಾಥ್‌ ಅವರೊಂದಿಗೆ ಬುಧವಾರ ವೀಕ್ಷಣೆ ಮಾಡಿದರು.

ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ ‘ಇದೇ ಸ್ಥಳದಲ್ಲಿ ಏಪ್ರಿಲ್‌ 17ರಂದು ಮದುವೆ ನಡೆಯಲಿದೆ. ಸಂಪ್ರದಾಯಬದ್ಧವಾಗಿ ಕಾರ್ಯಕ್ರಮಗಳು ನೆರವೇರಲಿದ್ದು, ಇನ್ನೆರಡು ದಿನದಲ್ಲಿ ಜ್ಯೋತಿಷಿಗಳು ಭೇಟಿ ಕೊಟ್ಟು ಸ್ಥಳ ಪರಿಶೀಲಿಸಲಿದ್ದಾರೆ. ಕಲ್ಯಾಣ ಮಂಟಪ ಸೇರಿದಂತೆ ಯಾವುದು ಎಲ್ಲಿರಬೇಕು ಎಂದು ಹೇಳಲಿದ್ದಾರೆ. ಭೋಜನಾಲಯ, ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ’ ಎಂದು ತಿಳಿಸಿದರು.

‘ಇದು ಆಡಂಬರದ ಮದುವೆ ಅಲ್ಲ. ಆದರೆ ಯಾವುದಕ್ಕೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಂಚೆಯೇ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಆಹ್ವಾನಪತ್ರಿಕೆ ಸರಳವಾಗಿ ಇರಲಿದ್ದು, ನನ್ನೆಲ್ಲ ಜನರಿಗೆ ಆಮಂತ್ರಣ ನೀಡಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)