ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಫೇಸ್‌ಬುಕ್‌ನಲ್ಲಿ ಸಾಲದ ಜಾಹೀರಾತು ನಂಬಿ ₹53 ಸಾವಿರ ಕಳೆದುಕೊಂಡ ವ್ಯಕ್ತಿ

Published : 25 ಸೆಪ್ಟೆಂಬರ್ 2024, 6:04 IST
Last Updated : 25 ಸೆಪ್ಟೆಂಬರ್ 2024, 6:04 IST
ಫಾಲೋ ಮಾಡಿ
Comments

ರಾಮನಗರ: ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಸಾಲದ ಜಾಹೀರಾತು ಮೇಲೆ ಕ್ಲಿಕ್ಕಿಸಿದ ಟೊಯೊಟಾ ಕಂಪನಿ ಉದ್ಯೋಗಿಯೊಬ್ಬರು ವಿವಿಧ ಶುಲ್ಕಗಳ ಹೆಸರಿನಲ್ಲಿ ₹53 ಸಾವಿರ ಕಳೆದುಕೊಂಡಿದ್ದಾರೆ. ಸಾಲದ ಅಗತ್ಯವಿದ್ದ ಉದ್ಯೋಗಿ ಫೇಸ್‌ಬಕ್‌ನಲ್ಲಿ ಕಂಡುಬಂದ ಫೈನಾನ್ಸ್‌ ಕಂಪನಿಯೊಂದರ ವೈಯಕ್ತಿಕ ಜಾಹೀರಾತು ಗಮನಿಸಿ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ.

ಕೆಲ ಹೊತ್ತಿನ ನಂತರ ಕಂಪನಿ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬರು, ನಿಮಗೆ ₹10 ಲಕ್ಷ ಸಾಲ ಮಂಜೂರಾಗಿದೆ ಎಂದು ಮಂಜೂರಾತಿ ಪತ್ರ ಕಳಿಸಿದರು. ಮತ್ತೆ ಕರೆ ಮಾಡಿ, ಸಾಲದ ಅರ್ಜಿಯನ್ನು ನೀವು ಸರಿಯಾಗಿ ಭರ್ತಿ ಮಾಡಿಲ್ಲ. ಹಾಗಾಗಿ, ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಭಾವಚಿತ್ರ, ಬ್ಯಾಂಕ್ ಪಾಸ್‌ಪುಸ್ತಕದ ಚಿತ್ರಗಳನ್ನು ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳಿಸುವಂತೆ ಸೂಚಿಸಿದ್ದಾರೆ. ಅದರಂತೆ, ಎಲ್ಲಾ ದಾಖಲೆಗಳನ್ನು ಉದ್ಯೋಗಿ ಕಳಿಸಿದ್ದಾರೆ.

‌ನಂತರ ಸಾಲ ಮಂಜೂರು ಮಾಡಲು ಪ್ರಕ್ರಿಯೆ ಶುಲ್ಕ, ವಿಮೆ, ಜಿಎಸ್‌ಟಿ ಶುಲ್ಕ ಹೆಸರಿನಲ್ಲಿ ಬೇರೆ ಬೇರೆ ಮೊಬೈಲ್ ಸಂಖ್ಯೆಗೆ ಆನ್‌ಲೈನ್‌ ಪೇಮೆಂಟ್ ಆ್ಯಪ್‌ಗಳ ಮೂಲಕ ₹53,050 ಪಾವತಿಸಿಕೊಂಡು, ಸಾಲ ನೀಡದೆ ವಂಚಿಸಿದ್ದಾರೆ. ವಂಚನೆ ಕುರಿತು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT