ರಾಮನಗರ: ಕೋವಿಡ್ ನಂತರ ಜನರಲ್ಲಿ ಆರೋಗ್ಯ ಸಮಸ್ಯೆ, ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿವೆ ಎಂದು ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಪ್ರಯುಕ್ತ ಈಚೆಗೆ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಬಹುತೇಕ ಬಡ ಹಾಗೂ ಮಧ್ಯಮ ವರ್ಗದವರ ಕುಟುಂಬದಲ್ಲಿ ರೇಷನ್ಗಿಂತ ಹೆಚ್ಚು ಹಣ ಚಿಕಿತ್ಸೆ ಹಾಗೂ ಔಷಧಗಳಿಗೆ ಖರ್ಚಾಗುತ್ತಿದೆ. ಸರ್ಕಾರ ಏನೇ ಯೋಜನೆ ಜಾರಿಗೆ ತಂದರೂ ಶೇ 45ರಷ್ಟು ಹಣವನ್ನು ಮಾತ್ರ ಸರ್ಕಾರದಿಂದ ನೀಡಲು ಸಾಧ್ಯ. ಉಳಿದ ಶೇ 55 ರಷ್ಟು ಹಣವನ್ನು ಜನರು ಭರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತವೆ. ಜೀವ ಶೈಲಿ ಬದಲಾವಣೆ, ಆರೋಗ್ಯ ಕಾಳಜಿ ಕೊರತೆ, ಆಹಾರ ಪದ್ಧತಿ ಬದಲಾವಣೆ, ಒತ್ತಡದ ಜೀವನ ಇದಕ್ಕೆಲ್ಲ ಕಾರಣ ಎಂದು ವಿಶ್ಲೇಷಿಸಿದರು.

ನಗರಸಭೆ, ಡಾ.ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆ, ಬಿಡದಿ ಹೋಬಳಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಚಾಲನೆ ನೀಡಿದರು.

ಆಟೊ, ಟೆಂಪೊ ಚಾಲಕರು ಹಾಗೂ ಶ್ರಮಿಕ ವರ್ಗದವರ ಆರೋಗ್ಯ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಶ್ರಮಿಕ ವರ್ಗದವರು ಕಾರ್ಯದೊತ್ತಡದ ಕಾರಣ ಆರೋಗ್ಯ ಕಾಪಾಡಿಕೊಳ್ಳಲು ನಿರ್ಲಕ್ಷ್ಯ ತೋರುವುದು ಹೆಚ್ಚು. ಆರ್ಥಿಕ ಪರಿಸ್ಥಿತಿಯೂ ಇದಕ್ಕೆ ಪ್ರಮುಖ ಕಾರಣ. ಉಚಿತ ಔಷಧ ವಿತರಣೆ ಮಾಡಿದ್ದೇವೆ ಎಂದು ಅವರು ಹೇಳಿದರು.

ನಗರಸಭೆ ಆಯುಕ್ತ ಡಾ.ಜಯಣ್ಣ, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ನಿಜಾಮುದ್ದೀನ್ ಷರೀಫ್, ಮುತ್ತುರಾಜ್, ಮಂಜುನಾಥ್, ಜಯಲಕ್ಷಮ್ಮ, ಬೋರೇಗೌಡ, ಗಿರಿಜಮ್ಮ, ಸಮದ್, ಟಿಪಿಎಂಸಿಎಸ್ ಅಧ್ಯಕ್ಷ ಸುರೇಶ್, ಪ್ರವೀಣ್, ಶ್ರೀನಿವಾಸ್, ಡಾ.ರಮೇಶ್, ಡಾ.ಆನಂದ್, ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.