ಗುರುವಾರ , ಫೆಬ್ರವರಿ 9, 2023
30 °C

ಮಂಗಳೂರಿನಲ್ಲಿ ಎನ್‌ಐಎ ಕಚೇರಿ ತೆರೆಯಿರಿ: ಮುತಾಲಿಕ್‌ ಆಗ್ರಹ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕರಾವಳಿ ಭಾಗದಲ್ಲಿ ಇಸ್ಲಾಮಿಕ್ ಗೂಂಡಾ ಶಕ್ತಿ ಬೆಳೆಯುತ್ತಿದೆ. ಸರ್ಕಾರ ಅಲ್ಲಿ ಅಗತ್ಯಬಿದ್ದಲ್ಲಿ ಎನ್‌ಐಎ ಕಚೇರಿ ತೆರೆಯಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಒತ್ತಾಯಿಸಿದರು.

‘ ಮಂಗಳೂರು ಬಾಂಬ್ ಸ್ಪೋಟದ ಹಿಂದೆ ತಮಿಳುನಾಡಿನ ಎಸ್ ಡಿಪಿಐ ಲಿಂಕ್‌ ಇದ್ದಂತೆ ಇದೆ. ಕೇರಳ, ತಮಿಳುನಾಡು ಗಡಿಯಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್ ಈ ಹಿಂದೆ ಬಂಧನವಾಗಿದ್ದ ವ್ಯಕ್ತಿ. ಆತನ ಬಿಡುಗಡೆ ಆಗದಿದ್ದರೆ ಬಾಂಬ್ ಸ್ಪೋಟ ಆಗುತ್ತಿರಲಿಲ್ಲ’ ಎಂದರು.

ಸ್ವತಂತ್ರ ಸ್ಪರ್ಧೆ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ  ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ. ಐದು ಕ್ಷೇತ್ರಗಳಲ್ಲಿ ಸರ್ವೆ ನಡೆದಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ಈ ಬಗ್ಗೆ ತೀರ್ಮಾನ ಪ್ರಕಟಿಸುತ್ತೇನೆ. 25 ಹಿಂದುತ್ವವಾದಿಗಳಿಗೆ ಟಿಕೆಟ್‌ ನೀಡುವಂತೆ ಬಿಜೆಪಿಯವರನ್ನು ಕೇಳಿದ್ದೆವು. ಅವರು ಕೊಟ್ಟಿಲ್ಲ. ಹೀಗಾಗಿ ಎಲ್ಲರೂ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದೇವೆ ಎಂದರು.

‘ ಕಾಂಗ್ರೆಸ್‌ ಕುಮ್ಮಕ್ಕಿನಿಂದ ಕನಕಪುರದಲ್ಲಿ ಕ್ರೈಸ್ತ ಧರ್ಮಕ್ಕೆ  ಮತಾಂತರ ಹೆಚ್ಚಿದೆ. ಸೋನಿಯಾ, ರಾಹುಲ್‌ ಮೆಚ್ಚಿಸಲು ಈ ಕೆಲಸ ನಡೆದಿದ್ದು, ಅಕ್ರಮವಾಗಿ ಚರ್ಚ್‌ಗಳು ತಲೆ ಎತ್ತುತ್ತಿವೆ. ಅವರಿಗೆ ಕುಮ್ಮಕ್ಕು ನೀಡಲು ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಈಗ ರೇಷನ್‌ ಕಾರ್ಡ್‌ ಹಿಂದೆ ಏಸು ಭಾವಚಿತ್ರ ಮುದ್ರಿಸಿ ಹಂಚಿದ್ದಾರೆ. ಅಧಿಕಾರಿಗಳು ಇದೆಲ್ಲವನ್ನೂ ಹದ್ದುಬಸ್ತಿನಲ್ಲಿ ಇಡಬೇಕು’ ಎಂದರು.

‘ ದೆಹಲಿ ಘಟನೆಯಿಂದ ಹಿಂದೂ ಯುವತಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಪೋಷಕರೂ ಕೂಡ ಕಾಳಜಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು