ರಾಮನಗರ: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪಿನ ನಡುವೆ ಇತ್ತೀಚೆಗೆ ನಡೆದ ಮಾರಾಮಾರಿ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಐವರು ಕೈದಿಗಳನ್ನು ಪಕ್ಕದ ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪುನೀತ್ ಕುಮಾರ್ ಅಲಿಯಾಸ್ ಔಟು,
ಪ್ರಮೋದ್ ಅಲಿಯಾಸ್ ಕರಿಯ, ಅಭಿಷೇಕ್ ಅಲಿಯಾಸ್ ಅಭಿ, ಅರುಣ ಹಾಗೂ ದೇವರಾಜು ಸ್ಥಳಾಂತರಗೊಂಡವರು.

ಸ್ಥಳಾಂತರಗೊಂಡಿರುವ ಕೈದಿಗಳು ಸಂಜಯ್ ಅಲಿಯಾಸ್ ಸಂಜು ಎಂಬಾತನ ಗುಂಪಿಗೆ ಸೇರಿದವರು. ಸಂಜಯ್ ಮತ್ತು ಸಿದ್ದರಾಜು ಅಲಿಯಸ್ ಸೀಜಿಂಗ್ ಸಿದ್ದ ಗುಂಪಿನ ನಡುವೆ ಜಗಳ ನಡೆದಿತ್ತು. ದಲಿತ ಯುವಕನ ಕೈ ಕತ್ತರಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ಹರ್ಷ ಅಲಿಯಾಸ್ ಕೈಮ ಮತ್ತು ದೇವರಾಜು ವಿಷಯದಲ್ಲಿ ಕಾರಾಗೃಹದಲ್ಲಿ ಗಲಾಟೆ ನಡೆದಿತ್ತು. ಆಗ ಸಿದ್ದ ಹರ್ಷ ಪರ ನಿಂತಿದ್ದ ಎಂದು ಮೂಲಗಳು ತಿಳಿಸಿವೆ.

ಕಾರಾಗೃಹದಲ್ಲಿ ಆ. 28ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ 23 ಕೈದಿಗಳ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಸದ್ಯ ಸ್ಥಳಾಂತರಗೊಂಡಿರುವ ಕೈದಿಗಳು ಸೇರಿದಂತೆ 23 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸೀಜಿಂಗ್ ಸಿದ್ದ ಮತ್ತು ಸಂಜಯ್ ಇಬ್ಬರು ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು. ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಪರಸ್ಪರ ದ್ವೇಷ ಕಾರುತ್ತಿದ್ದರು. ಅದೇ ಕಾರಣಕ್ಕೆ ಸಂಜು ನೇತೃತ್ವದ ಗುಂಪು ಸಿದ್ದನ ಕಡೆಯ ಹುಡುಗರ ಮೇಲೆ ಜುಲೈನಲ್ಲಿ ರಾಮನಗರ ಹೊರವಲಯದ ಅಚ್ಚಲು ಗ್ರಾಮದಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಅಪಹರಿಸಿ ಚನ್ನಪಟ್ಟಣ ಬಳಿಯ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಬಿಟ್ಟು ಬಿಟ್ಟಿತ್ತು.

ಘಟನಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಜಯ್, ಪುನೀತ್ ಕುಮಾರ್, ಶಶಾಂಕ, ದೇವರಾಜು, ಅರುಣ, ಪ್ರಮೋದ ಸೇರಿದಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಎಲ್ಲರನ್ನೂ ಬಂಧಿಸಿದ್ದರು. ಈ ಪೈಕಿ, ಸಂಜಯ್ನನ್ನು ಮಂಡ್ಯ ಕಾರಾಗೃಹಕ್ಕೆ ಕಳಿಸಿದ್ದರು. ಇತ್ತೀಚೆಗೆ ಸಿದ್ದನನ್ನು ಸಹ ಪೊಲೀಸರು ಬಂಧಿಸಿದ್ದರು.

ರಾಮನಗರ ಕಾರಾಗೃಹದಲ್ಲಿದ್ದ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಹರ್ಷ ಮತ್ತು ದೇವರಾಜ ನಡುವಣ ವೈಷಮ್ಯದ ವಿಷಯವು ಕಾರಾಗೃಹದಲ್ಲಿ ಎರಡೂ ಗುಂಪುಗಳ ನಡುವೆ ಗಲಾಟೆಗೆ ಕಾರಣವಾಗಿತ್ತು. ಹಾಗಾಗಿ, ಸಂಜಯ್ ಗುಂಪಿನವರನ್ನು ಮಂಡ್ಯಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.