ಶನಿವಾರ, ಆಗಸ್ಟ್ 8, 2020
24 °C

ಪಿಯು ಫಲಿತಾಂಶ: ಬೃಂದಾಗೆ 600ಕ್ಕೆ 596 ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಜಗದಾಪುರ ಗ್ರಾಮದ ಜೆ.ಎನ್.ಬೃಂದಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಬೃಂದಾ, ಕನ್ನಡದಲ್ಲಿ 100, ಆಂಗ್ಲಭಾಷೆಯಲ್ಲಿ 96, ಅರ್ಥಶಾಸ್ತ್ರದಲ್ಲಿ 100, ವ್ಯವಹಾರ ಅಧ್ಯಯನದಲ್ಲಿ100, ಲೆಕ್ಕಶಾಸ್ತ್ರದಲ್ಲಿ 100, ಗಣಕವಿಜ್ಞಾನದಲ್ಲಿ 100 ಅಂಕ ಪಡೆದು ಸಾಧನೆ ತೋರಿದ್ದಾಳೆ.

ಗ್ರಾಮದ ಕಮಲ –ನಾಗೇಶ್ ದಂಪತಿ ಪುತ್ರಿ ಬೃಂದಾ ಪ್ರಾಥಮಿಕ ಶಿಕ್ಷಣ ಜಗದಾಪುರದಲ್ಲಿ, ಪ್ರೌಢಶಿಕ್ಷಣವನ್ನು ನವೋದಯ ಶಾಲೆಯಲ್ಲಿ ಮುಗಿಸಿ, ಮೈಸೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾಳೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು