ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಡಂಬಹಳ್ಳಿ ಭಾಗದಲ್ಲಿ ಉತ್ತಮ ಮಳೆ

Published 11 ಮೇ 2024, 13:56 IST
Last Updated 11 ಮೇ 2024, 13:56 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಭಾಗದಲ್ಲಿ ಶನಿವಾರ ಸಾಯಂಕಾಲ ಬಿರುಗಾಳಿ ಮಿಶ್ರಿತ ಉತ್ತಮ ಮಳೆ ಸುರಿಯಿತು.


ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ಕರಲಹಳ್ಳಿ, ಅಂಚೀಪುರ, ಬಾಣಂತಹಳ್ಳಿ, ಎಲೆತೋಟದಹಳ್ಳಿ, ಬಲ್ಲಾಪಟ್ಟಣ, ಮಂಗಾಡಹಳ್ಳಿ, ಜೆ.ಬ್ಯಾಡರಹಳ್ಳಿ, ವಡ್ಡರಹಳ್ಳಿ, ವಿರುಪಾಕ್ಷಿಪುರ ಸೇರಿದಂತೆ ಕೆಲವೆಡೆ ಉತ್ತಮ ಮಳೆ ಆಯಿತು. ಹಾಗೆಯೇ ಶ್ಯಾನುಭೋಗನಹಳ್ಳಿ, ಸಿಂಗರಾಜಿಪುರ ಸೇರಿದಂತೆ ಕೆಲವೆಡೆ ಸಾಧಾರಣ ಮಳೆ ಸುರಿಯಿತು.

ಬಿರುಗಾಳಿ ಜತೆಗೆ ಮಳೆ ಬಂದ ಕಾರಣ ರೈತರ ಬೆಳೆಗಳಿಗೆ ಹಾನಿಯಾಗಿದೆ. ಕೆಲವೆಡೆ ಬಾಳೆ, ಜೋಳ, ಮಾವು, ಸೀಮೆಹುಲ್ಲು, ತೆಂಗಿನ ಬೆಳೆಗೆ ಹಾನಿಯಾದ ವರದಿಯಾಗಿದೆ. ಸಣ್ಣಪುಟ್ಟ ಮರಗಳು ಧರೆಗುರುಳಿವೆ.

ಶನಿವಾರ ಸುರಿದ ಮಳೆ ರೈತರ ಮುಖದಲ್ಲಿ ಸಂತಸ ತಂದಿತು. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಭೂಮಿಗೆ ತಂಪನೆರೆಯಿತು.


ನಗರವೂ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿಲ್ಲ. ಬಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಈ ವರ್ಷ ತುಂತುರು ಮಳೆ ಹೊರತುಪಡಿಸಿದರೆ ಈವರೆಗೆ ಇನ್ನೂ ಮಳೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT