ರಾಮನಗರ: ‘ನಗರಸಭೆಯನ್ನು ಗ್ರೇಡ್–1 ಆಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ನಗರದ ಸುತ್ತ ಇರುವ ಹುಣಸನಹಳ್ಳಿ, ಮಾಯಗಾನಹಳ್ಳಿ ಹಾಗೂ ಬಿಳಗುಂಬ ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುವುದು. ಅದಕ್ಕೆ ಪೂರಕವಾಗಿ ಪಂಚಾಯಿತಿಗಳ ಜನಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಸಭೆಯ ಗಮನಕ್ಕೆ ತಂದ ಅವರು, ‘ನಗರಸಭೆಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಸರ್ಕಾರ ಸಹ ಸಮ್ಮತಿ ನೀಡಿದೆ. ಅದಕ್ಕೆ ಪೂರಕವಾದ ಎಲ್ಲಾ ಪ್ರಕ್ರಿಯೆಗಳು ಭರದಿಂದ ನಡೆಯುತ್ತಿವೆ. ಮೂರು ಗ್ರಾ.ಪಂ.ಗಳು ಸೇರ್ಪಡೆಯಾದರೆ ನಗರಸಭೆ ವ್ಯಾಪ್ತಿಗೆ ಮೂರೂ ದಿಕ್ಕಿನಲ್ಲಿ ಹಿಗ್ಗಲಿದೆ’ ಎಂದರು.

ಮುಟ್ಟುಗೋಲು: ನಗರದ ಎಂ.ಜಿ. ರಸ್ತೆಯಲ್ಲಿರುವ ನಗರಸಭೆ ಮಳಿಗೆಗಳಲ್ಲಿ ಬಾಡಿಗೆಗೆ ಇರುವವರು ಬಾಡಿಗೆ ಪಾವತಿಸದ ಕಾರಣ, ಈಗಾಗಲೇ ಅವರು ಪಾವತಿಸಿರುವ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಕೆಲ ಸದಸ್ಯರು, ಏಕಾಏಕಿ ಕ್ರಮ ಕೈಗೊಳ್ಳದೆ ಕಾಲಾವಕಾಶ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.

ಸದಸ್ಯ ರಮೇಶ್, ‘ಮಳಿಗೆ ಬಾಡಿಗೆದಾರರಿಗೆ ಮಾನವೀಯತೆಯ ಆಧಾರದ ಮೇಲೆ ಕೆಲ ದಿನ ಅವಕಾಶ ನೀಡಬೇಕು’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಹರಾಜು ಪ್ರಕ್ರಿಯೆಯಲ್ಲಿ ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ಯಾರೂ ಇದುವರೆಗೆ ಬಾಡಿಗೆ ಪಾವತಿಸಿಲ್ಲ. ಈಗಾಗಲೇ ಅವರಿಗೆ ಬಾಡಿಗೆ ಪಾವತಿಗೆ ಸೂಚನೆ ನೀಡಿ, ಕಾಲಾವಕಾಶ ಕೊಟ್ಟರೂ ಸ್ಪಂದಿಸಿಲ್ಲ’ ಎಂದು ಹೇಳಿದರು.

‘ಅಂತಿಮವಾಗಿ ಎಲ್ಲರಿಗೂ ಮೂರು ದಿನ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಬಾಡಿಗೆ ಪಾವತಿಸದಿದ್ದರೆ, ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದರು. ಅದಕ್ಕೆ ಸಮ್ಮತಿಸಿದ ಸಭೆ, ಇನ್ನು ಮುಂದೆ ಸಕಾಲಕ್ಕೆ ಎಲ್ಲರೂ ಬಾಡಿಗೆ ಪಾವತಿಸುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿತು.

ನೀರು, ರಸ್ತೆ ಸಮಸ್ಯೆ: ನಗರದಲ್ಲಿ ನಿರಂತರ ನೀರು ಪೂರೈಕೆ ಇದ್ದರೂ ಕೆಲ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಇರುವುದರ ಕುರಿತು ಗಮನ ಸೆಳೆದ ಕೆಲ ಸದಸ್ಯರು, ಸಮಸ್ಯೆ ಬಗೆಹರಿಸಲು ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷರು ಪ್ರತಿನಿಧಿಸುವ ವಾರ್ಡ್ –5ರಲ್ಲೇ ಕೆಲ ಮನೆಗಳಿಗೆ ನೀರಿನ ಸಂಪರ್ಕವಿಲ್ಲ ಎಂದು ಸದಸ್ಯ ಸೋಮಶೇಖರ್ ಮಣಿ ದೂರಿದರು.

ನಗರದ ಕೆಲ ವಾರ್ಡ್ಗಳಲ್ಲಿ ರಸ್ತೆ ತೀರಾ ಹದಗೆಟ್ಟಿರುವುದರಿಂದ ಜನರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಕೆಲ ರಸ್ತೆಗಳು ದೂಳುಮಯವಾಗಿವೆ. ರಸ್ತೆ ದುರಸ್ತಿ ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸದಸ್ಯರಾದ ಗೋವಿಂದರಾಜು, ಮಹಾಲಕ್ಷ್ಮಿ ಹಾಗೂ ಇತರರು ಆಗ್ರಹಿಸಿದರು.

ಕಾಮಗಾರಿ ಆರಂಭಿಸಿ: ಮಿನಿ ವಿಧಾನಸೌಧಕ್ಕೆ ನೀರು ಪೂರೈಕೆ ಮಾಡುವ ಪೈಪ್ಲೈನ್ ಕಾಮಗಾರಿಯನ್ನು ಸ್ಥಗಿತಗೊಂಡಿದೆ. ಅರ್ಧಕ್ಕೆ ಕೆಲಸ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಹಾಗಾಗಿ, ಕೂಡಲೇ ಅದನ್ನು ಪರಿಶೀಲಿಸಿ ಕಾಮಗಾರಿಯನ್ನು ಮತ್ತೆ ಆರಂಭಿಸಬೇಕು ಎಂದು ಜೆಡಿಎಸ್ ಸದಸ್ಯ ಮಂಜುನಾಥ್ ಒತ್ತಾಯಿಸಿದರು.

ನಗರಸಭೆ ಸದಸ್ಯರಿಗೆ ನೀಡುವ ಮಾಸಿಕ ₹2 ಸಾವಿರ ಗೌರವ ಧನವನ್ನು ₹5 ಸಾವಿರಕ್ಕೆ ಏರಿಸುವ ಪ್ರಸ್ತಾವಕ್ಕೆ ಹಾಗೂ ನೃತ್ಯಗಾರ್ತಿ ಚಿತ್ರಾ ರಾವ್ ಅವರನ್ನು ರಾಮನಗರ ನಗರಸಭೆಯ ಸ್ವಚ್ಛತಾ ರಾಯಭಾರಿಯಾಗಿ ನೇಮಕ ಮಾಡುವ ಪ್ರಸ್ತಾವಕ್ಕೆ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು.

ನಗರಸಭೆ ಉಪಾಧ್ಯಕ್ಷ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಷ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

3 ದಿನದಲ್ಲಿ ಮಳಿಗೆ ಬಾಡಿಗೆ ಪಾವತಿಸದಿದ್ದರೆ ಮುಂಗಡ ಹಣ ಮುಟ್ಟುಗೋಲು ಸದಸ್ಯರ ಗೌರವ ಧನವನ್ನು ₹5 ಸಾವಿರಕ್ಕೆ ಏರಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀರಿನ ಸಂಪರ್ಕ ಕಲ್ಪಿಸಲು, ಹದಗೆಟ್ಟ ರಸ್ತೆ ದುರಸ್ತಿಪಡಿಸಲು ಸದಸ್ಯರ ಆಗ್ರಹ

ಸಾಧಕರಿಗೆ ‘ಕೆಂಗಲ್ ಹನುಮಂತಯ್ಯ ಪ್ರಶಸ್ತಿ’

ನಗರಸಭೆ ವತಿಯಿಂದ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ಕೆಂಗಲ್ ಹನುಮಂತಯ್ಯ ಪ್ರಶಸ್ತಿ’ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ನಗರದ ಪಿಡಬ್ಲ್ಯೂಡಿ ವೃತ್ತಕ್ಕೆ (ಎಸ್ಪಿ ಕಚೇರಿ ವೃತ್ತ) ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರು ನಾಮಕರಣ ಮಾಡುವಂತೆ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ನಗರಸಭೆಗೆ ಮನವಿ ಸಲ್ಲಿಸಿದೆ. ಈ ಕುರಿತ ಪ್ರಸ್ತಾವವನ್ನು ಸರ್ಕಾರಕ್ಕೆ ಕಳಿಸಲಾಗುವುದು. ಒಪ್ಪಿಗೆ ಸಿಕ್ಕರೆ ನಾಮಕರಣ ಮಾಡಲಾಗುವುದು. ಜೊತೆಗೆ ರಾಮನಗರದ ಅಂದ ಮತ್ತು ಬ್ರ್ಯಾಂಡ್ ಹೆಚ್ಚಿಸುವ ಸಲುವಾಗಿ ರೈಲು ನಿಲ್ದಾಣ ವೃತ್ತ ಹಳೆ ಬಸ್ ನಿಲ್ದಾಣ ವೃತ್ತದಲ್ಲಿರುವ ಕೆಂಗಲ್ ಹನುಮಂತಯ್ಯ ಪುತ್ಥಳಿ ಹಾಗೂ ಕೆಂಪೇಗೌಡ ವೃತ್ತದಲ್ಲಿ ‘ಐ ಲವ್ ಯು ರಾಮನಗರ’ಎಂಬ ಫಲಕವನ್ನು ಸದ್ಯದಲ್ಲೇ ಅಳವಡಿಸಲಾಗುವುದು ಎಂದು ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.