ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

ನಗರಸಭೆ ಜನಸಂಖ್ಯೆ ಹೆಚ್ಚಿದಂತೆ ವ್ಯಾಪ್ತಿಯೂ ಹಿಗ್ಗಬೇಕಿದೆ. ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಬೇಕಾದರೆ ಗ್ರೇಡ್–1ಗೆ ಏರಬೇಕಿದೆ. ಅದಕ್ಕಾಗಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇನೆ. ಅವರೂ ಸ್ಪಂದಿಸಿದ್ದು ಅಗತ್ಯ ಪ್ರಕ್ರಿಯೆ ನಡೆಯುತ್ತಿದೆ
– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕಕೆ. ಶೇಷಾದ್ರಿ ಶಶಿ ಅಧ್ಯಕ್ಷ ರಾಮನಗರ ನಗರಸಭೆ
‘ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ’
‘ಜಿಲ್ಲಾ ಕೇಂದ್ರವಾಗಿರುವ ರಾಮನಗರದ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯ ವಿಸ್ತರಣೆ ಮತ್ತು ಗ್ರೇಡ್–1 ಆಗಿ ಮೇಲ್ದರ್ಜೆಗೇರಿಸಲು ಶಾಸಕ ಇಕ್ಬಾಲ್ ಹುಸೇನ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆ ಮೇರೆಗೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ. ನಗರದ ಅಭಿವೃದ್ದಿಗೆ ಹೆಚ್ಚುವರಿ ಅನುದಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಮಾಡಲಾಗಿದೆ. ಗ್ರೇಡ್–1 ನಗರಸಭೆಯಾಗಿ ನಗರ ವಿಸ್ತರಣೆಯಾಗುವುದರಿಂದ ವ್ಯಾಪ್ತಿಯೂ ಹಿಗ್ಗಲಿದೆ. ವಾರ್ಡ್‌ಗಳ ಸಂಖ್ಯೆ ಜೊತೆಗೆ ಸಿಬ್ಬಂದಿ ಸಂಖ್ಯೆಯೂ ಹೆಚ್ಚಾಗಲಿದೆ. ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಆಗಿರುವುದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.
ಡಾ. ಜಯಣ್ಣ ಪೌರಾಯುಕ್ತ ರಾಮನಗರ ನಗರಸಭೆ
‘ಒಂದೂವರೆ ಲಕ್ಷ ಜನಸಂಖ್ಯೆ ಅಗತ್ಯ’
‘ಗ್ರೇಡ್–1 ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಮತ್ತು ನಗರದ ಗಡಿಯ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಜಿ.ಪಂ. ಕೇಳಿರುವ ವರದಿಗಳನ್ನು ಸಿದ್ದಪಡಿಸಲಾಗುತ್ತಿದೆ. ಗ್ರೇಡ್–1 ಆಗಬೇಕಾದರೆ ನಗರದ ಜನಸಂಖ್ಯೆ 1.50 ಲಕ್ಷ ಇರಬೇಕು. ಸದ್ಯದ ಜನಸಂಖ್ಯೆ ಅಂದಾಜು 1.35 ಲಕ್ಷ ಇದೆ. ಜನಸಂಖ್ಯೆ ಮಾನದಂಡ ತಲುಪಲು ಹೊರವಲಯದ ಗ್ರಾಮಗಳನ್ನು ಸೇರಿಸಿಕೊಳ್ಳಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ವರದಿ ಜಿ.ಪಂ. ಮತ್ತು ತಾ.ಪಂ.ಗೆ ಹೋಗಲಿದೆ. ನಗರಸಭೆ ವ್ಯಾಪ್ತಿಗೆ ಗ್ರಾಮಗಳನ್ನು ಬಿಟ್ಟು ಕೊಡಲು ಸಂಬಂಧಪಟ್ಟ ಗ್ರಾ.ಪಂ.ನಲ್ಲಿ ಪ್ರಸ್ತಾವಕ್ಕೆ ಒಪ್ಪಿಗೆ ಸಿಗಬೇಕು. ಬಳಿಕ ಅಂತಿಮ ವರದಿಯು ಪೌರಾಡಳಿತ ನಿರ್ದೇಶನಾಲಯ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ಪರಿಶೀಲನೆಗೆ ಒಳಪಡಲಿದೆ. ಅಂತಿಮವಾಗಿ ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ನಗರಸಭೆಯು ಗ್ರೇಡ್–1 ಆಗಿ ಮೇಲ್ದರ್ಜೆಗೇರಲಿದೆ’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಹೇಳಿದರು.
ಯಾವ್ಯಾವ ಗ್ರಾಮ ಸೇರಲಿವೆ?
ಹರಿಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗೇನಹಳ್ಳಿ ಕೆಂಪೇಗೌಡನದೊಡ್ಡಿ ವಡೇರಹಳ್ಳಿ ವಿಭೂತಿಕೆರೆ ಪಂಚಾಯಿತಿ ವ್ಯಾಪ್ತಿಯ ಅರ್ಚಕರಹಳ್ಳಿ ಚನ್ನಮಾನಹಳ್ಳಿಹುಣಸನಹಳ್ಳಿ ಪಂಚಾಯಿತಿಯ ಕೊತ್ತಿಪುರ ಶಿಡ್ಲುಕಲ್ಲು ಹಾಗೂ ಬಿಳುಗುಂಬ ಪಂಚಾಯಿತಿ ವ್ಯಾಪ್ತಿಯ ಬೋಳಪ್ಪನಹಳ್ಳಿ.