ರಾಮನಗರ: ಮನೆಯಲ್ಲೇ ಕುಳಿತು ಶುರು ಮಾಡಬಹುದಾದ ಆಹಾರ ಸಂಸ್ಕರಣೆ ಉದ್ಯಮಕ್ಕೆ ನೆರವಾಗುವುದಕ್ಕಾಗಿ, ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯದಿಂದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು (ಪಿಎಂಎಫ್ಎಂಇ) 2020-21ನೇ ಸಾಲಿನಿಂದ ಶುರು ಮಾಡಿದೆ.

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮ ನಿಯಮಿತವು ಈ ಯೋಜನೆಗೆ ರಾಜ್ಯದಲ್ಲಿ ನೋಡಲ್ ಏಜೆನ್ಸಿಯಾಗಿದ್ದು, ಅದರ ಮೂಲಕವೇ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕೃಷಿ ಇಲಾಖೆಯ ನೆರವಿನೊಂದಿಗೆ ನಿಗಮವು ಯೋಜನೆ ಅನುಷ್ಠಾನ ಮಾಡುತ್ತಿದೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನವು ಆಮೆಗತಿಯಲ್ಲಿದೆ.

ಹೊಸ ಆಹಾರ ಸಂಸ್ಕರಣ ಘಟಕ ಆರಂಭ ಹಾಗೂ ಈಗಾಗಲೇ ಇರುವ ಘಟಕದ ವಿಸ್ತರಣೆಗೆ ಶೇ 50ರಷ್ಟು ಸಹಾಯಧನದೊಂದಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಉದ್ದೇಶ. ಬೇರೆ ಜಿಲ್ಲೆಗಳಲ್ಲಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಮೂರಂಕಿ ದಾಟಿದ್ದರೆ, ಜಿಲ್ಲೆಯಲ್ಲಿ ಇನ್ನೂ ಎರಡಂಕಿ ದಾಟಿಲ್ಲ.

ಕೇವಲ 85 ಫಲಾನುಭವಿಗಳು: ‘ಯೋಜನೆಯಡಿ ಜಿಲ್ಲೆಯಲ್ಲಿ 85 ಫಲಾನುಭವಿಗಳಿದ್ದಾರೆ. ವಿವಿಧ ಬ್ಯಾಂಕ್ಗಳಿಂದ ಒಟ್ಟು ₹8.27 ಕೋಟಿ ಸಾಲ ಮಂಜೂರಾಗಿದೆ. ಇನ್ನು 30 ಅರ್ಜಿಗಳ ಸಾಲ ಬಿಡುಗಡೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿವಿಧ ಕಾರಣಗಳಿಗಾಗಿ 72 ಅರ್ಜಿಗಳು ತಿರಸ್ಕಾರಗೊಂಡಿವೆ. ಅಲ್ಲದೆ, 11 ಅರ್ಜಿದಾರರಿಂದ ಹೆಚ್ಚುವರಿ ದಾಖಲೆ ನೀಡುವಂತೆ ಬ್ಯಾಂಕ್ಗಳು ಕೇಳಿವೆ. ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಕ್ರಮದಲ್ಲಿ ಅರ್ಜಿ ಹಾಕಿದರೆ ಮಾತ್ರ ಬ್ಯಾಂಕ್ನಲ್ಲಿ ಸ್ವೀಕೃತವಾಗುತ್ತದೆ. ಇಲ್ಲವಾದರೆ, ಅಗತ್ಯ ದಾಖಲೆ ಸಲ್ಲಿಸುವಂತೆ ಸೂಚಿಸಲಾಗುತ್ತದೆ’ ಎಂದು ಹೇಳಿದರು.

₹15 ಲಕ್ಷದವರೆಗೆ ಸಹಾಯಧನ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಡಿ ಶೇ 50ರಷ್ಟು ಅಥವಾ ಗರಿಷ್ಠ ₹15 ಲಕ್ಷ ಸಹಾಯಧನ ಸಿಗಲಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹6 ಲಕ್ಷ ಮತ್ತು ರಾಜ್ಯ ಸರ್ಕಾರದ ಪಾಲು ₹9 ಲಕ್ಷವಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಯಡಿ ಸಿರಿಧಾನ್ಯಗಳು ಮತ್ತು ಇತರ ಧಾನ್ಯಗಳ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನ, ಬೇಕರಿ ಉತ್ಪನ್ನ, ಕೋಲ್ಡ್ ಪ್ರಸ್ಡ್ ಆಯಿಲ್, ಮೆಣಸಿನ ಪುಡಿ, ಘಟಕ, ಶುಂಠಿ ಸಂಸ್ಕರಣಾ ಘಟಕ, ಅನಾನಸ್ ಸಂಸ್ಕರಣಾ ಘಟಕ, ಮಸಾಲ ಉತ್ಪನ್ನಗಳ ಘಟಕ, ತೆಂಗು ಉತ್ಪನ್ನ, ಕುಕ್ಕುಟ ಉತ್ಪನ್ನ, ಸಾಗರ ಉತ್ಪನ್ನ, ವಿವಿಧ ಹಣ್ಣು ಮತ್ತು ತರಕಾರಿ ಒಳಗೊಂಡ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಸ್ತಾಪಿಸಬಹುದಾಗಿದೆ’ ಎಂದರು.

‘18 ವರ್ಷ ಮೇಲ್ಪಟ್ಟ ಹಾಗೂ ಈಗಾಗಲೇ ಬೇರೆ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದವರೂ ಯೋಜನೆಗೆ ಅರ್ಹರು. ವೈಯಕ್ತಿಕ ಉದ್ಯಮಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ 35ರಷ್ಟು ಸಹಾಯಧನದ ಜೊತೆಗೆ, ರಾಜ್ಯ ಸರ್ಕಾರದಿಂದ ಶೇ 15 ಸಹಾಯಧನ ಅಂದರೆ ₹15 ಲಕ್ಷ ಅಥವಾ ಶೇ 50ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ. ಆಹಾರ ಸಂಸ್ಕರಣೆ ಚಟುವಟಿಕೆಯಲ್ಲಿರುವ ಸಂಘಗಳ ಸದಸ್ಯರಿಗೆ ಪ್ರಾಥಮಿಕ ಬಂಡವಾಳವಾಗಿ ಮತ್ತು ಸಣ್ಣ ಉಪಕರಣಗಳ ಖರೀದಿಗೆ ಕಡಿಮೆ ಬಡ್ಡಿಯಲ್ಲಿ ತಲಾ ₹40 ಸಾವಿರ ಸಾಲ ಸಿಗಲಿದೆ’ ಎಂದು ತಿಳಿಸಿದರು.

ಯೋಜನೆಯಡಿ ಹೋಬಳಿಗೆ ಒಬ್ಬರಂತೆ ಡಿಆರ್ಪಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಡಿಆರ್ಪಿಗಳಾಗಲು ಯಾರೂ ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಯೋಜನೆಯ ಪ್ರಗತಿ ಮಂದಗತಿಯಲ್ಲಿದೆ
– ಎನ್. ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ

ಬ್ರ್ಯಾಂಡಿಂಗ್ ಮಾರುಕಟ್ಟೆಗೆ ನೆರವು

ಯೋಜನೆಯಡಿ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕಿಂಗ್ ಜಾಹೀರಾತು ಸಾಮಾನ್ಯ ಬ್ರ್ಯಾಂಡ್ ಅಭಿವೃದ್ದಿ ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿ ಸೇರಿ ವಿವಿಧ ಚಟುವಟಿಕೆಗೆ ಶೇ 50ರಷ್ಟು ಸಹಾಯಧನ ಸಿಗಲಿದೆ. ರೈತ ಉತ್ಪಾದಕರ ಸಂಸ್ಥೆಗಳು ಅಥವಾ ಕಂಪನಿಗಳು ಸಹಕಾರಿಗಳು ಸ್ವಸಹಾಯ ಸಂಘಗಳು ಸಹಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಮಗಳ ವಿಶೇಷ ಉದ್ದೇಶ ಸಂಸ್ಥೆಗಳು ಈ ಪ್ರಯೋಜನ ಪಡೆಯಬಹುದಾಗಿದೆ.

ಕನಿಷ್ಠ ಮೂಲಸೌಕರ್ಯ ಸಾಕು ಯೋಜನೆಯಡಿ ಅರ್ಹತೆಗೆ ಕನಿಷ್ಠ ಮೂಲಸೌಕರ್ಯ ಸಾಕು. ಸಾಮಾನ್ಯ ಮೂಲಸೌಕರ್ಯ ಸೃಷ್ಟಿಗೆ ಶೇ 35ರಷ್ಟು ಸಾಲ ಸಂಪರ್ಕಿತ ಸಹಾಯಧನ ಸಿಗಲಿದೆ. ಇದರಲ್ಲಿ ಗರಿಷ್ಠ ₹3 ಕೋಟಿವರೆಗೆ ಸಹಾಯಧನಕ್ಕೆ ಅರ್ಹತೆ ಸಿಗಲಿದೆ. ರೈತ ಉತ್ಪಾದಕರ ಸಂಸ್ಥೆಗಳು ಅಥವಾ ಕಂಪನಿಗಳು ಸಹಕಾರಿಗಳು ಸ್ವಸಹಾಯ ಸಂಘಗಳು ಮತ್ತು ಅದರ ಒಕ್ಕೂಟಗಳು ಸರ್ಕಾರಿ ಸಂಸ್ಥೆಗಳು ಇದಕ್ಕೆ ಅರ್ಹ. ಅರ್ಜಿದಾರರ ಸಂಸ್ಥೆಯ ಕನಿಷ್ಠ ವಹಿವಾಟು ಮತ್ತು ಅನುಭವದ ಯಾವುದೇ ಪೂರ್ವ ಷರತ್ತುಗಳಿಲ್ಲ. ವಿಂಗಡಣೆ ಶ್ರೇಣಿಕರ ಸಂಗ್ರಹಣ ಸಾಮಾನ್ಯ ಸಂಸ್ಕರಣೆ ಪ್ಯಾಕೇಜಿಂಗ್ ಪ್ರಯೋಗಾಲಯ ಇತ್ಯಾದಿ ಘಟಕಗಳನ್ನು ಸ್ಥಾಪಿಸಲು ಅವಕಾಶವಿದೆ.

Cut-off box - ಯೋಜನೆಯ ವಿಶೇಷತೆ ಏನು? – ಆಹಾರ ಸಂಸ್ಕರಣಾ ವಲಯದಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸುವುದು– ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು– ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿ ರೈತರ ಆದಾಯ ಹೆಚ್ಚಿಸುವುದು– ಉದ್ಯಮಗಳನ್ನು ಔಪಚಾರಿಕಗೊಳಿಸುವುದು– ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಯೋಜನೆ ಪ್ರಸ್ತಾವ ಸಿದ್ದತೆ ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಸಹಾಯ– ಆಹಾರ ಸಂಸ್ಕರಣಾ ತಾಂತ್ರಿಕತೆಗಳ ಬಗ್ಗೆ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗಳಿಂದ ಉಚಿತ ತರಬೇತಿ– ಯೋಜನೆಯಡಿ ಒದಗಿಸುವ ಸಾಲಕ್ಕೆ ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ನಿಧಿ ಟ್ರಸ್ಟ್ನಿಂದ ಕ್ರೆಡಿಟ್ ಗ್ಯಾರಂಟಿ

Cut-off box - ಜಿಲ್ಲೆಯಲ್ಲಿ ಡಿಆರ್ಪಿಗಳಿಗೆ ಬರ ಯೋಜನೆಗಾಗಿ ಸಿದ್ಧಪಡಿಸಿದ ಪ್ರಸ್ತಾವದೊಂದಿಗೆ ಅರ್ಜಿಯನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಮೂಲಕವೇ ಬ್ಯಾಂಕ್ಗೆ ಸಲ್ಲಿಸಬೇಕು. ಇದಕ್ಕಾಗಿ ಪ್ರತಿ ಯೋಜನೆಗೆ ಡಿಆರ್ಪಿಗಳಿಗೆ ನಿಗಮವು ಅವರಿಗೆ ₹20 ಸಾವಿರ ಪಾವತಿಸುತ್ತದೆ. ಆದರೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕೇವಲ ಇಬ್ಬರು ಮಾತ್ರ ಡಿಆರ್ಪಿಗಳಿದ್ದಾರೆ. ಅದರಲ್ಲೂ ಒಬ್ಬರು ಮತ್ತೊಂದು ಜಿಲ್ಲೆಯನ್ನೂ ನೋಡಿಕೊಳ್ಳುತ್ತಾರೆ. ಡಿಆರ್ಪಿಗಳ ಬರವೂ ಜಿಲ್ಲೆಯಲ್ಲಿ ಯೋಜನೆ ಫಲಾನುಭವಿಗಳ ಸಂಖ್ಯೆ ಎರಡಂಕಿ ದಾಟದಿರುವುದಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.