‘ಮಾಹಿತಿ ಪಡೆದರೂ ಲಾಗಿನ್ ಕೊಟ್ಟಿಲ್ಲ’
‘ಪಡಿತರ ಚೀಟಿ ತಿದ್ದುಪಡಿ ಲಾಗಿನ್ ಐ.ಡಿ ನೀಡುವುದಕ್ಕಾಗಿ ಅಧಿಕಾರಿಗಳು ಎರಡು ವಾರ ಮುಂಚೆಯೇ ನಮ್ಮಿಂದ ಅಗತ್ಯ ಮಾಹಿತಿ ಪಡೆದಿದ್ದರು. ಆದರೆ ತಿದ್ದುಪಡಿ ದಿನಾಂಕ ಬಂದರೂ ಕೊಡಲಿಲ್ಲ. ಈ ಕುರಿತು ಹೋಗಿ ವಿಚಾರಿಸಿ ಕಾದರೂ ಕೊಡಲಿಲ್ಲ. ಏನೊ ತಾಂತ್ರಿಕ ಸಮಸ್ಯೆ ಹೇಳಿ ಕಳಿಸಿದರು. ತಿದ್ದುಪಡಿಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದರೂ ಇನ್ನು ಐ.ಡಿ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಕಾದು ಸಾಕಾಗಿ ವಾಪಸಾದೆವು’ ಎಂದು ಗ್ರಾಮ ಒನ್ ಕೇಂದ್ರ ನಡೆಸುವ ರಾಮನಗರ ತಾಲ್ಲೂಕಿನ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ತಾಂತ್ರಿಕ ಸಮಸ್ಯೆಯಿಂದ ವಿಳಂಬ’ ‘ಪಡಿತರ ಚೀಟಿ ತಿದ್ದುಪಡಿಗಾಗಿ ಸ್ವಯಂ ದೃಢೀಕರಣ ಪತ್ರ ಸೇರಿದಂತೆ ವಿವಿಧ ಮಾಹಿತಿಯನ್ನು 117 ಗ್ರಾಮ ಒನ್ ಕೇಂದ್ರದವರು ಕೊಟ್ಟಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಲಾಗಿನ್ ಐ.ಡಿ ಕೊಡಲು ವಿಳಂಬವಾಯಿತು. ಆದರೂ ಗುರುವಾರ ರಾತ್ರಿವರೆಗೆ ಒಂದಷ್ಟು ಮಂದಿಗೆ ಐ.ಡಿ ಕೊಟ್ಟಿದ್ದೇವೆ. ಉಳಿದವರೆಗೆ ನಾಳೆ ಕೊಡಲಾಗುವುದು. ಸಾರ್ವಜನಿಕರು ಆತಂಕಪಡಬೇಕಿಲ್ಲ. ಚೀಟಿ ತಿದ್ದುಪಡಿಗೆ ದಿನಾಂಕ ವಿಸ್ತರಣೆಯಾಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.