ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯೆ ಮಾಡಿದವರ ಎನ್‌ಕೌಂಟರ್‌ಗೂ ಸರ್ಕಾರ ಸಿದ್ಧ: ಅಶ್ವತ್ಥನಾರಾಯಣ

Last Updated 29 ಜುಲೈ 2022, 6:34 IST
ಅಕ್ಷರ ಗಾತ್ರ

ರಾಮನಗರ: ಮಂಗಳೂರಿನಲ್ಲಿ ಅಮಾಯಕರ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಎನ್‌ಕೌಂಟರ್ ಸೇರಿದಂತೆ ಯಾವುದೇ ಕಠಿಣ ಕ್ರಮಕ್ಕೆ ಸರ್ಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಶುಕ್ರವಾರ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಯಾವ ಕಾರಣಕ್ಕೂ ಕೊಲೆ ಗಡುಕರು, ದುಷ್ಕರ್ಮಿಗಳನ್ನು ರಕ್ಷಿಸುವ ಪ್ರಶ್ನೆ ಇಲ್ಲ. ಈಗಾಗಲೇ ತನಿಖೆಗೆ ತಂಡಗಳನ್ನು ರಚಿಸಲಾಗಿದೆ. ಅಮಾಯಕರ ಜೀವ ರಕ್ಷಣೆ ನಮ್ಮ‌ ಕರ್ತವ್ಯ ಎಂದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ ಈ ಸಂದರ್ಭದಲ್ಲಿ ಸಹಜ. ಈಗಾಗಲೇ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಸರ್ಕಾರ ಹಾಗೂ ಗೃಹ ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಯು.ಪಿ. ಮಾದರಿ ಅಲ್ಲ, ಅದಕ್ಕಿಂತ ಐದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳುತ್ತೇವೆ. ಅದರಲ್ಲೂ ಯಾವುದೇ ಮುಲಾಜು ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಿಎಫ್‌ಐ, ಎಸ್‌ಡಿಪಿಐ ನಿಷೇಧಿಸುವಂತೆ ಕಾಂಗ್ರೆಸ್‌ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಸಚಿವರು ' ಈ ಬಗ್ಗೆ ಮಾತನಾಡಲು ಕಾಂಗ್ರೆಸ್‌ ಗೆ ನೈತಿಕತೆ ಇಲ್ಲ. ಅವರ ತುಷ್ಟೀಕರಣ ರಾಜಕಾರಣವೇ ಇದಕ್ಕೆಲ್ಲ‌ ಕಾರಣ. ಅವರಿಗೂ ದೇಶದ್ರೋಹಿಗಳಿಗೂ ವ್ಯತ್ಯಾಸ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

' ನನ್ನನ್ನು ಮತ್ತೆ ಇ.ಡಿ. ಬಲೆಗೆ ಸಿಲುಕಿಸಲಾಗುತ್ತಿದೆ' ಎಂದು
ಡಿ.ಕೆ. ಶಿವಕುಮಾರ್ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿ ' ಅವರ ಖೆಡ್ಡಾ ಅವರೇ ತೋಡಿಕೊಂಡಿದ್ದಾರೆ. ನಾವೇನು‌ ಮಾಡುವ ಅಗತ್ಯ ಇಲ್ಲ' ಎಂದರು.

ಭ್ರಷ್ಟಾಚಾರ ಡಿಕೆಶಿ‌ ಸಂಸ್ಕೃತಿ. ಕನಕಪುರದಲ್ಲಿ ಖಂಡಿತ ಅದನ್ನು ಕ್ಲೀನ್ ಮಾಡುತ್ತೇವೆ. ಈ ಬಗ್ಗೆ ಅನುಮಾನ ಬೇಡ ಎಂದರು.

ಇವುಗಳನ್ನೂ ಓದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT