ಮಾಗಡಿ: ತಾಲ್ಲೂಕಿನ ಚಕ್ರಬಾವಿ ಸರ್ಕಾರಿ ಶಾಲಾ ಆವರಣದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ, ಕೃಷಿ, ಬಿ.ಎಸ್ಸಿ, ಕೃಷಿ ವ್ಯವಹಾರ ನಿರ್ವಹಣೆ ವಿದ್ಯಾರ್ಥಿಗಳ ಮತ್ತು ಬಿ.ಟೆಕ್ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ನಡೆಯಿತು.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಿರಿಯ ವಿದ್ಯಾರ್ಥಿಗಳ ಸಂಘ, ಕೃಷಿ ತಂತ್ರಜ್ಞರ ಸಂಸ್ಥೆ, ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಷನ್, ಹೆಬ್ಬಾಳ ಪಶುವೈದ್ಯಕೀಯ ಮಹಾವಿದ್ಯಾಲಯ, ಸಹಕಾರ ಹಾಲು ಒಕ್ಕೂಟ, ಕರುಣಾ ಪ್ರಾಣಿ ಕಲ್ಯಾಣ ಸಂಘ, ಸೀಗೆಕುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬರಡು ರಾಸುಗಳ ತಪಾಸಣೆ ಮತ್ತು ಪಶು ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್, ನುರಿತ ಪಶು ವೈದ್ಯರು ತಮ್ಮ ಗ್ರಾಮಕ್ಕೆ ಬಂದಿರುವುದರಿಂದ ರಾಸುಗಳ ಪರೀಕ್ಷೆ ಮಾಡಿಸಿಕೊಂಡು ರಾಸುಗಳಲ್ಲಿ ಇರುವ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಕೋರಿದರು.

ತಾಲ್ಲೂಕು ಪಶುಪಾಲನ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್, ಪ್ರಾಣಿ ಪ್ರಸೂತಿ ತಜ್ಞರು, ಪ್ರಾಣಿ ಪ್ರಸೂತಿ ವಿಭಾಗದ ಡಾ.ಬಿ.ಎಂ.ರವೀಂದ್ರನಾಥ್, ಹಾಲು ಒಕ್ಕೂಟ ಉಪ ವ್ಯವಸ್ಥಾಪಕರು ಡಾ.ಅಜಯ್ ಕುಮಾರ್, ಪಶು ವೈದ್ಯಕೀಯ ಇಲಾಖೆಯ ಡಾ.ಜಯಶ್ರೀ, ಹಾಲು ಒಕ್ಕೂಟ ಪಶುವೈದ್ಯಾಧಿಕಾರಿ ಡಾ.ಶಶಿಕುಮಾರ್, ಡಾ.ಚೇತನ್, ರೂಪ ಆರ್., ಹುಲಿಕಟ್ಟೆ ಪಶು ಚಿಕಿತ್ಸಾಲಯ ಪಶುವೈದ್ಯಾಧಿಕಾರಿ ಡಾ.ಟಿ. ಚಂದನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.