ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಎಂಬುದು ಜೀವನ ಬುನಾದಿ

Last Updated 31 ಡಿಸೆಂಬರ್ 2019, 12:39 IST
ಅಕ್ಷರ ಗಾತ್ರ

ರಾಮನಗರ: ಶಾಲೆಯೆಂದರೆ ಕೇವಲ ನೆನಪುಗಳಲ್ಲ ನಿಮ್ಮ ಜೀವನದ ಬುನಾದಿ ಎಂದು ಲೇಖಕ ಡಾ. ರಾಧಾಕೃಷ್ಣನ್ ಪಿಳೈ ಹೇಳಿದರು.

ಇಲ್ಲಿನ ಬೆತೆಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ, ಪ್ರಿ ಯೂನಿವರ್ಸಿಟಿ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ಪ್ರಪಂಚದ ಯಾವುದೇ ಭಾಗದಲ್ಲಿದ್ದರು ನಿಮ್ಮ ಶಾಲೆಯನ್ನು ಮರೆಯಬಾರದು. ಪೋಷಕರು ತಮ್ಮ ಮಕ್ಕಳ ಮೇಲೆ ಉನ್ನತ ನಿರೀಕ್ಷೆ ಹೊಂದಿರುತ್ತಾರೆ. ಅದನ್ನು ಅರಿತು ವಿದ್ಯಾರ್ಥಿಗಳು ಒಬ್ಬರಿಗೊಬ್ಬರನ್ನು ಹೋಲಿಕೆ ಮಾಡದೆ ಎಲ್ಲರ ಜತೆ ಬೆರತು ಬಾಳ್ವೆ ಮಾಡುವುದುನ್ನು ಕಲಿಯಬೇಕು’ ಎಂದು ತಿಳಿಸಿದರು.

ಹೋಲಿಕೆ ಮಾಡುವುದಕ್ಕಿಂತ ಹೊಂದಾಣಿಕೆ ಮಾಡಿಕೊಳ್ಳುವುದು ಲೇಸು. ಏಕೆಂದರೆ ಹೋಲಿಕೆ ಮಾಡಿದರೆ ಅಲ್ಲಿ ಸ್ಪರ್ಧೆ ಏರ್ಪಡುತ್ತದೆ, ಹೊಂದಾಣಿಕೆ ಮಾಡಿದರೆ ಅಲ್ಲಿ ಅನ್ಯೋನ್ಯತೆ ಬೆಳೆಯುತ್ತದೆ ಕೆಲವರು ಓದಿನಲ್ಲಿ ಮುಂದಿದ್ದರೆ ಕೆಲವರು ಆಟದಲ್ಲಿ, ಕೆಲವರು ಕಲೆಯಲ್ಲಿ ಮುಂದಿರುತ್ತಾರೆ ಹಾಗೆ ಅವರವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೇರೇಪಿಸುವ ಕೆಲಸ ಪೋಷಕರು ಮಾಡಬೇಕು ಎಂದು ತಿಳಿಸಿದರು.

ಇಂಡಿಯನ್ ಆರ್ಮಿ ಸೈನಿಕ ಕೆ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಪ್ರತಿಯೊಬ್ಬ ಪ್ರಜೆಗೂ ಸೇನೆ ಬಗ್ಗೆ ತಿಳಿದಿರಬೇಕು. ಕೇವಲ ಆಗಸ್ಟ್ 15, ಜನವರಿ 26ಕ್ಕೆ ಮಾತ್ರ ಸೀಮಿತವಾಗಿರದೇ ವರ್ಷವಿಡೀ ಸೈನಿಕರನ್ನು ಬೆಂಬಲಿಸುವ ಕೆಲಸ ಮಾಡಬೇಕು. ದೇಶ ಭಕ್ತಿ ಎನ್ನುವುದು ಸೈನಿಕರಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿಯೊಬ್ಬರಿಗೂ ಚಿಕ್ಕವಯಸ್ಸಿನಿಂದಲೇ ದೇಶಭಕ್ತಿ ಬರಬೇಕು, ಇದು ನಮ್ಮ ದೇಶ ಎಂಬ ಭಾವನೆ ಬರಬೇಕು’ ಎಂದು ತಿಳಿಸಿದರು.

ಮುಖಂಡ ಪ್ರಿಯ ಕೃಷ್ಣ, ಎಸಿಪಿ ಮೊಹಮ್ಮದ್ ಸಜಿದ್ ಖಾನ್, ಜೆಇಎಸ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಜಿ.ಎಸ್. ಗಣೇಶ್, ಬೇತೆಲ್ ಶಾಲೆಯ ಪ್ರಾಚಾರ್ಯೆ ಎ. ರಿಟಮನು, ಶಾಲೆಯ ಅಧ್ಯಕ್ಷ ಪಿ. ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT