ಅಪರಿಚಿತ ವ್ಯಕ್ತಿ ಕೊಲೆ: ಆರೋಪಿ ಬಂಧನ

ಕನಕಪುರ: ಅಪರಿಚಿತ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿ ಮತ್ತು ಕೊಲೆಯಾದ ಮೃತ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕಗ್ಗಲೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಮಾದಾಪುರ ಗ್ರಾಮದ ಪುಟ್ಟಸ್ವಾಮಿ ಕೊಲೆಯಾದವರು.
ಕೊಲೆ ಮಾಡಿದ ಆರೋಪಿಯನ್ನು ಕಗ್ಗಲೀಪುರ ಸಂಕ್ರಾಂತಿ ವೆಂಚರ್ಸ್ ಲೇಔಟ್‌ನ ಕಾಂಕ್ರಿಟ್ ಗ್ಯಾಂಗ್ ಆಳುಗಳ ಜತೆ ಕೂಲಿ ಕೆಲಸ ಮಾಡುತ್ತಿದ್ದ ಬಾಪು ಡಾಂಗೆ ಅಲಿಯಾಸ್ ಕಾಶಿ ಕಿಶನ್ ಡಾಂಗೆ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಗ್ಗಲೀಪುರದಲ್ಲಿ ಜ. 21ರಂದು ಪುಟ್ಟಸ್ವಾಮಿ ಮಲಗಿರುವ ಜಾಗಕ್ಕೆ ಆರೋಪಿ ಬಂದು ಜಗಳ ತೆಗೆದಿದ್ದಾನೆ. ಪಕ್ಕದಲ್ಲಿದ್ದ ಸಿಮೆಂಟ್ ಬ್ಲಾಕ್ ಇಟ್ಟಿಗೆಯನ್ನು ತಲೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿ ಮತ್ತು ಕೊಲೆಗಾರನ ಮೈಮೇಲಿನ ಬಟ್ಟೆಯಲ್ಲಿದ್ದ ರಕ್ತದ ಕಲೆಯಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಹಾರೋಹಳ್ಳಿ ಸರ್ಕಲ್ ಇನ್‌ಸ್ಪೆಕ್ಟರ್ ಸಿ. ಸತೀಶ್, ಕಗ್ಗಲೀಪುರ ಎಸ್‌ಐ ವೆಂಕಟೇಶ್ ಕೆ. ಮತ್ತು ತಂಡ ಕಾರ್ಯಾಚರಣೆ
ನಡೆಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.