ಬುಧವಾರ, ಮೇ 27, 2020
27 °C

ಹೈದರಾಬಾದ್‌ನ ಮೂವರು ಕಾರ್ಮಿಕರಿಗೆ ಜ್ವರ: ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿ ತಾಲ್ಲೂಕಿನ ಕೆಂಪಸಾಗರ ಸಮೀಪ ಓಡಾಡಿಕೊಂಡಿದ್ದ ಹೈದರಾಬಾದ್‌ನ ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಭಾನುವಾರ ತಪಾಸಣೆಗೆ ಒಳಪಡಿಸಲಾಗಿದ್ದು, ಜ್ವರಕ್ಕೆ ತುತ್ತಾದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಮಿಕರು ಕೆಲಸವಿಲ್ಲದೇ ಓಡಾಡಿಕೊಂಡು ಇದ್ದದ್ದನ್ನು ಸ್ಥಳೀಯರು ಅಧಿಕಾರಿಗಳ‌ ಗಮನಕ್ಕೆ  ತಂದರು. ಆರೋಗ್ಯ ಇಲಾಖೆ ಹಾಗೂ ಪೊಲೀಸರ ನೇತೃತ್ವದಲ್ಲಿ ಅವರ ಆರೋಗ್ಯ ತಪಾಸಣೆ ನಡೆಯಿತು. ಎಲೆಕ್ಟ್ರೋ ಥರ್ಮಾಮೀಟರ್‌ನಿಂದ ತಪಾಸಣೆ ಮಾಡಿದ ಸಂದರ್ಭ ಜ್ವರ ಕಂಡು ಬಂದ ಮೂವರನ್ನು ಮಾಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಕಾರ್ಮಿಕರ ಕೈಗೆ ಮುದ್ರೆ ಹಾಕಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.