ಬಿಡದಿ (ರಾಮನಗರ): ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದ ಕವಿ ಬಂಕಿಮಚಂದ್ರ ಚಟರ್ಜಿ ರಚಿತ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪಟ್ಟಣದ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘದ ಜೆವಿಐಟಿ ಕಾಲೇಜು ಆವರಣದಲ್ಲಿ 150 ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೀತೆಯನ್ನು ಹಾಡುವ ಮೂಲಕ ಸಂಭ್ರಮಾಚರಿಸಿದರು. 150 ಕಂಠಗಳಲ್ಲಿ ಏಕಕಾಲದಲ್ಲಿ ಮೂಡಿಬಂದ ಗೀತೆಯು ಎಲ್ಲೆಡೆ ಮಾರ್ಧನಿಸಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಎಂ. ಲಿಂಗಪ್ಪ, ‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ದ ನಡೆದ ಹೋರಾಟದಲ್ಲಿ ವಂದೇ ಮಾತರಂ ಗೀತೆ ಅನುರಣಿಸುತ್ತಿತ್ತು. ಆ ಮೂಲಕ ದೇಶದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ದೇಶಭಕ್ತಿಯ ಹುರುಪು ತುಂಬುತ್ತಿತ್ತು. ವಿದ್ಯಾರ್ಥಿಗಳು ಗೀತೆಯ ಮಹತ್ವವನ್ನು ಅರಿಯಬೇಕು’ ಎಂದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಮಾಡುತ್ತಿದ್ದ ದೌರ್ಜನ್ಯದ ವಿರುದ್ಧ ವಂದೇ ಮಾತರಂ ಕ್ರಾಂತಿಗೀತೆ ಮೊಳಗುತ್ತಿತ್ತು. ದೇಶಭಕ್ತಿಯ ಚಿಲುಮೆಯಂತಿದ್ದ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆಯು, ದೇಶದ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.

ಸಂಘದ ಖಜಾಂಚಿ ಬಿ.ಎನ್. ಗಂಗಾಧರಯ್ಯ, ಜೆವಿಐಟಿ ಪ್ರಾಂಶುಪಾಲ ಸೀತಾ ಗಿರೀಶ್, ಪಿಯು ಕಾಲೇಜಿನ ಪ್ರಾಂಶುಪಾಲ ಸರವಣನ್, ಕನ್ನಡ ಮಾಧ್ಯಮಿಕ ಶಾಲೆಯ ಜಯಂತಿ, ಪಾರ್ವತಿ, ಉಪನ್ಯಾಸಕರಾದ ಚಿಕ್ಕಪುಟ್ಟಯ್ಯ, ಶಿವರಾಮು, ಶರತ್, ಶಿಕ್ಷಕಿ ಮಂಜುಳ ಹಾಗೂ ಇತರರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.