ರಾಮನಗರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ 8ರಂದು ಬಿಡದಿಯ ವಂಡರ್‌ಲಾದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿರಲಿದೆ.

10 ವರ್ಷ ಮೀರಿದ ಗಂಡು ಮಕ್ಕಳಿಗೆ ಆ ದಿನ ಪ್ರವೇಶವಿರುವುದಿಲ್ಲ. ಆ ದಿನದಂದು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಸಾವಿರ ಮಹಿಳೆಯರಿಗೆ ಒಂದು ಟಿಕೆಟ್ ಪಡೆದರೆ ಮತ್ತೊಂದು ಟಿಕೆಟ್ ಉಚಿತವಿರಲಿದೆ. ಜೊತೆಗೆ ಮೊದಲ 300 ಗ್ರಾಹಕರಿಗೆ ₹699ಕ್ಕೆ ‘ಒಂದು ಕೊಂಡರೆ ಮತ್ತೊಂದು ಉಚಿತ’ ಬಫೆ ಊಟದ ಕೊಡುಗೆಯೂ ಇದೆ.

ಬಿಎಂಟಿಸಿ ಗ್ರಾಹಕರಿಗೆ ರಿಯಾಯಿತಿ: 8ರಂದು ಬೆಂಗಳೂರಿನಿಂದ ವಂಡರ್‌ಲಾಗೆ ಬರುವ ಮಹಿಳೆಯರಿಗೆ ಬಿಎಂಟಿಸಿಯು ವೋಲ್ವೊ ಬಸ್ ಸೇವೆ ಒದಗಿಸಲಿದೆ. ಅದೇ ದಿನ ಪಾರ್ಕ್ ಟಿಕೆಟ್ ಕೌಂಟರ್‌ನಲ್ಲಿ ತಮ್ಮ ಬಸ್ ಟಿಕೆಟ್ ತೋರಿಸಿ ಮಹಿಳೆಯರು ಪಾರ್ಕ್ ಟಿಕೆಟ್ ಮೇಲೆ ಶೇ 15ರಷ್ಟು ರಿಯಾಯಿತಿ ಪಡೆಯಬಹುದು ಎಂದು ವಂಡರ್ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ವೆಬ್‌ಸೈಟ್ WWW. wonderla.com ಅಥವಾ ಮೊಬೈಲ್ ಸಂಖ್ಯೆ 80372 30333, 80350 73966 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.