ಶುಕ್ರವಾರ, ಏಪ್ರಿಲ್ 16, 2021
23 °C

ರಾಮನವಮಿ ಆಚರಣೆಗೂ ಕೊರೊನಾ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದಲ್ಲಿ ರಾಮನವಮಿ ಆಚರಣೆ ಮೇಲೂ ಕೊರೊನಾ ಕರಿನೆರಳು ಬಿದ್ದಿದ್ದು, ರಾಮಾಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು, ಹೆಚ್ಚು ಕಾಲ ದೇವಸ್ಥಾನದಲ್ಲಿ ನಿಲ್ಲದೆ ದೇವರ ದರ್ಶನ ಪಡೆದು ಮುಂದೆ ಸಾಗಬೇಕು ಎಂದು ದೇವಸ್ಥಾನದ ಅರ್ಚಕರು ಮನವಿ ಮಾಡುತ್ತಿದ್ದರು.

ದುರ್ಗಿಗುಡಿಯ ಸೀತಾರಾಮ ಮಂದಿರದಲ್ಲಿ ರಾಮನವಮಿ ಆಚರಿಸಲಾಯಿತು. ಅಲ್ಲಿ ಜನ ಸೇರಿದ್ದಾರೆ ಎಂಬ ಮಾಹಿತಿ ತಿಳಿದ ಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಇದ್ದ ಕೆಲವು ಜನರನ್ನ ಚದುರಿಸಿದರು.

ಪೂಜೆ ಮುಗಿದ ನಂತರ ದೇವಸ್ಥಾನದ ಪ್ರವೇಶ ನಿರ್ಬಂಧಿಸಿ, ಬಾಗಿಲು ಮುಚ್ಚಿದರು. ಇದರಿಂದ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನ ಸೇರಿದಂತೆ ದೇವಸ್ಥಾನಗಳು ಬಿಕೋ ಎನ್ನುತ್ತಿದ್ದವು. ಪ್ರತಿವರ್ಷ ನಗರದ ವಿವಿಧೆಡೆ ರಾಮನವಮಿ ಆಚರಣೆ ದಿನ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಗುತ್ತಿತ್ತು. ಆದರೆ, ಈ ವರ್ಷ ಕೊರೊನಾದಿಂದ ಲಾಕ್‌ಡೌನ್‌ ಆಗಿರುವುದರಿಂದ ಅನೇಕರು ಮನೆಗಳಲ್ಲಿಯೇ ರಾಮನವಮಿ ಆಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು