ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರಿಗೆ ಮತ್ತೆ ಬಂಪರ್: ₹ 1 ಹೆಚ್ಚಳ

Last Updated 4 ಫೆಬ್ರುವರಿ 2020, 14:37 IST
ಅಕ್ಷರ ಗಾತ್ರ

ಶಿವಮೊಗ್ಗ: ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಫೆ.1ರಿಂದಪ್ರತಿ ಲೀಟರ್‌ಗೆ ₹ 1 ಹೆಚ್ಚಳಮಾಡಲುಶಿಮುಲ್ನಿರ್ಧಿಸಿದೆ.

ಪ್ರಸ್ತುತ ಪ್ರತಿ ಲೀಟರ್‌ ಹಾಲಿಗೆಪ್ರಸ್ತುತ ₨ 28.70 ಸಿಗಲಿದೆ. ಸರ್ಕಾರ ಪ್ರತಿ ಲೀಟರ್‌ಗೆ ₹6 ಸಹಾಯಧನ ನೀಡುತ್ತಿದೆ. ಆ ಪ್ರೋತ್ಸಾಹಧನವೂಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಕನಿಷ್ಠ ₹ 35.70 ದೊರೆಯಲಿದೆ.

ಒಕ್ಕೂಟಆರು ತಿಂಗಳ ಅವಧಿಯಲ್ಲಿಹಾಲುಉತ್ಪಾದಕರಿಗೆ ನೀಡುವ ದರವನ್ನುನಾಲ್ಕನೇಬಾರಿ ಹೆಚ್ಚಳ ಮಾಡಿದೆ.ಲಾಭಾಂಶದ ಪ್ರಮಾಣ ಸತತ ಹೆಚ್ಚಳ ಕಾಣುತ್ತಿದ್ದು, ಹೆಚ್ಚುವರಿ ಲಾಭವನ್ನು ರೈತರಿಗೆ ವರ್ಗಾಯಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಮಾಹಿತಿ ನೀಡಿದರು.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,120 ಸಹಕಾರ ಹಾಲು ಒಕ್ಕೂಟಗಳಿವೆ.ಒಕ್ಕೂಟದ ವ್ಯಾಪ್ತಿಯಲ್ಲಿ ದಿನವಹಿ ಸರಾಸರಿ 4.80 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ದಿನವಹಿ ಸ್ಥಳೀಯ ಹಾಲು, ಮೊಸರು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅಂದಾಜು 2.50 ಲಕ್ಷ ಲೀಟರ್ ಬಳಕೆಯಾಗುತ್ತಿದೆ. ಉಳಿದ ಹಾಲನ್ನು ಕೇರಳಕ್ಕೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಉಪಯೋಗಕ್ಕೆ ಹಾಲಿನ ಪುಡಿ ತಯಾರಿಸಲು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT