ಬುಧವಾರ, ಮಾರ್ಚ್ 29, 2023
32 °C

ಒಂದೇ ದಿನ 7 ಕಡೆ ಕಳವು: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದೀಪಾವಳಿ ಹಬ್ಬದ ಒಂದೇ ದಿನ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ 7 ಕಡೆ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕೋಟೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಆಯನೂರಿನ ಗಗನ್‌, ಶಿವಮೊಗ್ಗ ಬೊಮ್ಮನಕಟ್ಟೆಯ ವಿಶಾಲ್‌, ಪ್ರೀತಮ್ ಬಂಧಿತ ಆರೋಪಿಗಳು. ಎಲ್ಲ ಮೂವರು 19ರ ವಯೋಮಾನದವರು.

ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನ.2ರಂದು ಬೈಕ್‌ವೊಂದನ್ನು ಕಳವು ಮಾಡಿದ್ದ ಆರೋಪಿಗಳು ನ.5ರ ಬೆಳಗಿನ ಜಾವ ಶಿವಮೊಗ್ಗ ನಗರದ 4 ಕಡೆ, ಭದ್ರಾವತಿ ನಗರದ ಮೂರು ಕಡೆಗಳಲ್ಲಿ ಮನೆಗಳ ಕಳವು ಮಾಡಿದ್ದರು. ವಿಳಾಸ ಕೇಳುವ, ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ಚಾಕು ತೋರಿಸಿ ಬೆದರಿಸಿ, ಜನರಿಂದ ನಗದು, ಮೊಬೈಲ್ ಫೋನ್ ಹಾಗೂ ಬಂಗಾರದ ಸರ ಸುಲಿಗೆ ಮಾಡಿದ್ದರು.

ಈ ಸಂಬಂಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಬಂಧಿತರಿಂದ ಬೈಕ್‌, 10 ಮೊಬೈಲ್ ಫೋನ್‌ಗಳು, ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು