ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಅಡಗೋಡಿಯ ಮೂಕಾರ್ತೇಶ್ವರ ದೇಗುಲದ ಶಿವಲಿಂಗ ಪುರಾತನ ಕಾಲಕ್ಕೆ ಸೇರಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಮೂಕಾರ್ತೇಶ್ವರ ದೇಗುಲ ಶಿಥಿಲಗೊಂಡಿದ್ದು, ಜೀರ್ಣೋದ್ಧಾರಕ್ಕೆ ದೇಗುಲ ಸಮಿತಿ ಮುಂದಾಗಿದೆ. ಈ ಸಂದರ್ಭದಲ್ಲಿ ಶಿವಲಿಂಗವನ್ನು ತೆಗೆದಿದ್ದು, ಲಿಂಗದ ವಿನ್ಯಾಸ ಗಮನ ಸೆಳೆದಿದೆ.
ಶಿವಲಿಂಗವು 14-15ನೇ ಶತಮಾನದ್ದು ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.
ಶಿವಲಿಂಗವು ಪೀಠ ಸೇರಿ 4 ಅಡಿ ಎತ್ತರವಿದೆ. 2.5 ಅಡಿಗೂ ಹೆಚ್ಚು ಸುತ್ತಳತೆ ಹೊಂದಿದ್ದು, ಪೀಠದಿಂದ ಶಿವಲಿಂಗ 1.5 ಅಡಿ ಎತ್ತರವಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ದೇಗುಲದ ಜೀರ್ಣೋದ್ಧಾರ ಕೈಗೊಂಡಿದ್ದು, ಲಿಂಗವು ಪುರಾತನ ಕಾಲದ ಇತಿಹಾಸ ಹೊಂದಿರುವುದರಿಂದ ಮಹತ್ವ ಬಂದಿದೆ ಎಂದು ಸ್ಥಳೀಯರಾದ ಶುಶ್ರುತ್ ಭಟ್ ತಿಳಿಸಿದ್ದಾರೆ.