ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರೆಬೈಲು ಆನೆ ಬಿಡಾರಕ್ಕೆ ಕುಟುಂಬಸ್ಥರೊಂದಿಗೆ ನಟ ಶಿವರಾಜಕುಮಾರ್ ಭೇಟಿ

ಆನೆ‌ ಸವಾರಿ, ತುಂಗಾ ನದಿ ಹಿನ್ನೀರಿನಲ್ಲಿ ದೋಣಿ ವಿಹಾರ
Published 14 ಏಪ್ರಿಲ್ 2024, 8:00 IST
Last Updated 14 ಏಪ್ರಿಲ್ 2024, 8:00 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭೆ ಚುನಾವಣೆಯ ಪ್ರಚಾರದ ಭರಾಟೆಯ ನಡುವೆ ನಟ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಸಕ್ರೆಬೈಲು ಆನೆ‌ ಬಿಡಾರಕ್ಕೆ ಭೇಟಿ ನೀಡಿ ಕಾಲ ಕಳೆದರು.

ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆ ಬಿಡಾರಕ್ಕೆ ಬಂದ ಶಿವರಾಜಕುಮಾರ್ ದಂಪತಿ ಹಾಗೂ ಮಕ್ಕಳು ಕೆಲಕಾಲ ಅನೆಗಳೊಂದಿಗೆ ಸಮಯ ಕಳೆದರು.

ಬಿಡಾರದ ಆನೆಗಳ ಬಗ್ಗೆ ಆಯಾ ಮಾವುತರಿಂದ ಮಾಹಿತಿ ಪಡೆದುಕೊಂಡರು.

ಆನೆಗಳಿಗೆ ದಂಪತಿ ಕಬ್ಬು ತಿನ್ನಿಸಿದರು.‌ ಫೋಟೊ ತೆಗೆಸಿಕೊಂಡರು. ನಂತರ ಆನೆ ಸವಾರಿ ಮಾಡಿದರು. ಅಲ್ಲಿಯೇ ಸಮೀಪದ ತುಂಗಾ ನದಿ ಹಿನ್ನೀರಿನಲ್ಲಿ ದೋಣಿ ವಿಹಾರ ನಡೆಸಿ ಆನಂದಿಸಿದರು.

ಸೆಲ್ಪಿಗೆ ಮುಗಿಬಿದ್ದ ಜನ:

ನಟ ಶಿವರಾಜ್ ಕುಮಾರ್ ಅವರು ಆನೆ ಬಿಡಾರಕ್ಕೆ ಬಂದಾಗ ಪ್ರವಾಸಿಗರು ಅವರೊಂದಿಗೆ ಸೆಲ್ಫಿ ತೆಗೆಯಿಸಿಕೊಳ್ಳಲು ಮುಗಿಬಿದ್ದರು.

ಶಿವರಾಜ್‌ ಕುಮಾರ್‌ಗೆ ಜೈ, ಅಣ್ಣಾವ್ರ ಮಗನಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಭಾನುವಾರ ರಜೆಯ ಕಾರಣ ಆನೆ ಬಿಡಾರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ನಟ ಶಿವರಾಜ ಕುಮಾರ್ ನೋಡಿ ಅವರಲ್ಲಿ ಖುಷಿ ಇಮ್ಮಡಿಗೊಂಡಿತು.

ಈ ವೇಳೆ ಸಚಿವ ಮಧು ಬಂಗಾರಪ್ಪ ಕೂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT