ಶಿವಮೊಗ್ಗ: ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮತ್ತು ಧರ್ಮಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ, ಎಸ್.ಜೆ.ಪಿ ಐಟಿಐ ಸಂಸ್ಥೆಯ 31ನೇ ವರ್ಷದ ವಾರ್ಷಿಕೋತ್ಸವ ಹಾಗೂ ವೀರಶೈವ ಲಿಂಗಾಯತ ವಧು ವರರ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯನಿಗೆ ನೀರು ಅನ್ನ ದೈಹಿಕ ವಿಕಾಸಕ್ಕೆ ಕಾರಣವಾದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ದುಡಿಮೆಯ ಬೆವರಿನಿಂದ ಗಳಿಸಿದ್ದು ಶಾಶ್ವತ ಮತ್ತು ಸುಖದಾಯಕ. ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕಾಯಕವೇ ಕಳಾ ಚೈತನ್ಯವೆಂದು ಬೋಧಿಸಿದ್ದಾರೆ. ಪರಿಶ್ರಮ-ಸಾಧನೆಯಿಲ್ಲದೇ ಶ್ರೇಯಸ್ಸು ಸಿಗಲಾರದು ಎಂದರು.

ಸಮಾರಂಭ ಉದ್ಘಾಟಿಸಿದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಆಧುನಿಕ ಕಾಲದಲ್ಲಿ ಮನುಷ್ಯ ಧರ್ಮ ಸಂಸ್ಕೃತಿ ಮತ್ತು ಪರಂಪರೆ ಬಗೆಗೆ ನಿರ್ಲಕ್ಷ ಮನೋಭಾವ ತಾಳಿದ್ದಾನೆ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾ ಕಿರಣ. ಸನಾತನ ಹಿಂದೂ ಸಂಸ್ಕೃತಿ ಸಂವರ್ಧಿಸುವ ಸಂಕಲ್ಪ ಎಲ್ಲರದ್ದೂ ಆಗಬೇಕು ಎಂದರು.

ಎಸ್.ಆರ್.ಎನ್.ಇ ಸಂಸ್ಥೆಯ ಅಧ್ಯಕ್ಷ ಹುನಗುಂದದ ಎಸ್.ಆರ್.ನವಲಿ ಹಿರೇಮಠ ಮಾತನಾಡಿ, ವಿಘ್ನೇಶ್ವರಯ್ಯ ಸೋಲಾಪುರ ತಮ್ಮ ಧಾರ್ಮಿಕ ಸಾಮಾಜಿಕ ಕಾರ್ಯಗಳಿಂದ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಬಿ.ಟಿ.ಶೇಖರಪ್ಪ, ಲಿಂಗಸಗೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸರ್ವೇಶ್ವರಿ ಹಿರೇಮಠ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್.ಜಿ.ಶೇಖರ, ಮಂಜುನಾಥ, ಸಿ.ಎಚ್.ಬಾಳನಗೌಡ್ರ ವಿಶೇಷ ಆಹ್ವಾನಿತರಾಗಿ ಗೌರವ ಸನ್ಮಾನ ಸ್ವೀಕರಿಸಿದರು. ಶಿವಮೊಗ್ಗ ನಿವೃತ್ತ ಇಂಜನಿಯರ್ ನಾಗರಾಜ ಬೆಳಕೇರಿಮಠ ಹಾಗೂ ಜಾವಳ್ಳಿ ದಯಾನಂದಸ್ವಾಮಿ ಗುರುರಕ್ಷೆ ಸ್ವೀಕರಿಸಿದರು. ಮಳಲಿ ಸಂಸ್ಥಾನದ ನಾಗಭೂಷಣ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಹಾಗೂ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಪ್ರಾಸ್ತಾವಿಕ ಮಾತನಾಡಿದ ವಿಘ್ನೇಶ್ವರಯ್ಯ ಸೋಲಾಪುರ, ಸಂಸ್ಥೆ ಅಲ್ಪಾವಧಿಯಲ್ಲಿ ಇಷ್ಟೊಂದು ಬೆಳೆಯಬೇಕಾದರೆ ರಂಭಾಪುರಿ ಶ್ರೀಗಳ ಆಶೀರ್ವಾದ, ಮಾರ್ಗದರ್ಶನ ಕಾರಣ ಎಂದರು.

ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಶ್ರೀಗಳನ್ನು ಎಂ.ಆರ್.ಎಸ್ ಸರ್ಕಲ್ನಿಂದ ಎಸ್.ಜೆ.ಪಿ ಐಟಿಐವರೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.