ಶಾಲಾ ಹಂತದಿಂದ ಭಗವದ್ಗೀತೆ ಬೋಧನೆಗೆ ಪ್ರಯತ್ನ; ಎಚ್‌ಡಿಕೆ
‘ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯದ ಹಂತದವರೆಗೂ ಪಠ್ಯದಲ್ಲಿ ಭಗವದ್ಗೀತೆ ಕಲಿಸುವಂತಾಗ
ಬೇಕು. ಇದಕ್ಕಾಗಿ ಕೇಂದ್ರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮನವಿಗೆ ಉತ್ತರಿಸಿದ ಅವರು, ‘ಭಗವದ್ಗೀತೆಯಲ್ಲಿನ ಶ್ರೀಕೃಷ್ಣನ ಸಂದೇಶಗಳನ್ನು ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಅರಿತರೆ ಹಿಂಸೆ, ದ್ವೇಷ ಮುಕ್ತ ಸಮಾಜ ಕಟ್ಟಲು ಸಾಧ್ಯ. ಈಶ್ವರಪ್ಪನವರ ಈ ಬೇಡಿಕೆ ಈಡೇರಿಸುವ ಜವಾಬ್ದಾರಿ ನಮ್ಮದು (ಕೇಂದ್ರ ಸರ್ಕಾರ)’ ಎಂದು ಹೇಳಿದರು.