ಶಿವಮೊಗ್ಗ: ‘ಯಾರು ಯಾವ ಉಪಾಸನಾ ಮಾರ್ಗದಲ್ಲಿ ಶ್ರದ್ಧೆ ಹೊಂದಿರುತ್ತಾರೋ, ಅದೇ ಮಾರ್ಗದಲ್ಲಿ ಅನುಗ್ರಹ ಮಾಡುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾರೆ’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಶಿರಸಿಯ ಸ್ವರ್ಣರಶ್ಮೀ ಟ್ರಸ್ಟ್, ಭಗವದ್ಗೀತಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಾ ಸಮರ್ಪಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬಹುತ್ವ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ವಿಶ್ವದ ಏಕಮಾತ್ರ ದೇಶ ನಮ್ಮದು. ಶ್ರೀಕೃಷ್ಣ ಸತ್ಯ ಒಂದೇ, ಮಾರ್ಗ ಹಲವು ಎಂದು ಹೇಳಿದ್ದಾರೆ. ಆದರೆ, ವಿದೇಶಿಯರು ಸತ್ಯ ಒಂದೇ, ಮಾರ್ಗವೂ ಒಂದೇ, ನಾನೇ ಸತ್ಯ ಎಂದು ಹೇಳುತ್ತಾರೆ. ಹೀಗಾಗಿ ಸಮನ್ವಯ ಸೂತ್ರಕಾರನೇ ಶ್ರೀಕೃಷ್ಣ’ ಎಂದರು.

ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ‘ಈ ದೇಹ ನಶ್ವರ ಆಗಿದ್ದರೂ ಶಾಶ್ವತವಾಗಿ ಉಳಿಯುವ ಭ್ರಮೆಯಲ್ಲಿ ಅನಾಹುತ, ಅಪಸವ್ಯಗಳನ್ನು ಮಾಡುತ್ತಿದ್ದೇವೆ. ಭ್ರಮೆಯ ಕೋಟೆ ಕಟ್ಟಿಕೊಂಡಿದ್ದೇವೆ’ ಎಂದರು.

‘ಈ ಹಿಂದೆ ಕೌರವ-ಪಾಂಡವರ ನಡುವೆ ಯುದ್ಧ ನಡೆಯುತ್ತಿತ್ತು. ಆದರೆ, ಈಗ ಮನುಷ್ಯನ ಒಳಗೇ ಯುದ್ಧ ನಡೆಯುತ್ತಿದೆ. ಯುದ್ಧವನ್ನು ನಮ್ಮ ಮೇಲೆ ನಾವೇ ಮಾಡಿಕೊಂಡು ಜಯ ಸಾಧಿಸಲು ಭಗವದ್ಗೀತೆ ದಾರಿದೀಪವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ನಾದಮಯನಂದನಾಥ ಸ್ವಾಮೀಜಿ, ‘ಆರೋಗ್ಯಯುತ ಸಮಾಜ ನಿರ್ಮಾಣವೇ ಗೀತೆಯ ಗುರಿ. ಈ ಭೌತಿಕ ದೇಹದಲ್ಲಿ ಆತ್ಮ ರೂಪದಲ್ಲಿ ಪರಮಾತ್ಮ ಇದ್ದಾನೆ. ಹುಟ್ಟು ಸಾವಿನ ನಡುವೆ ಆತ್ಮ ಭಗವಂತನ ಕಡೆ ಸಾಗಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಅದಕ್ಕೆ ಸಾಧನವೇ ಭಗವದ್ಗೀತೆ’ ಎಂದರು.

ಸ್ವರ್ಣವಲ್ಲಿ ಪ್ರಭಾ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ದೇಶದಲ್ಲಿ ಒಂದು ರೀತಿಯ ಅಜಾಗರೂಕತೆಯ ವಾತಾವರಣ ಕಾಣುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ಹಿಂಸೆ ಕಾಣುತ್ತಿಣ್ಣು, ಅದಕ್ಕೆ ಕಡಿವಾಣ ಹಾಕಬೇಕಿದೆ’ ಎಂದರು.

‘ಹಿಂದೆ ಶಾಲಾ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತದ ಪಠ್ಯಗಳು ಇರುತ್ತಿದ್ದವು. ಈಗ ಅದೆಲ್ಲಾ ಮರೆತೇಹೋದ ಸ್ಥಿತಿ ಇದೆ. ಪ್ರತಿ ಶಾಲೆಯಲ್ಲಿಯೂ ಭಗವದ್ಗೀತೆಯ ಅಧ್ಯಯನ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಸಂಸದ ಬಿ.ವೈ.ರಾಘವೇಂದ್ರ, ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್, ಭಗವದ್ಗೀತೆ ಅಭಿಯಾನದ ಜಿಲ್ಲಾ ಸಂಚಾಲಕ ಅಶೋಕ ಜಿ.ಭಟ್ ಉಪಸ್ಥಿತರಿದ್ದರು.

ಡಿ.ಎಸ್.ಅರುಣ್ ಸ್ವಾಗತಿಸಿದರು. ಉಪನ್ಯಾಸಕ ದತ್ತಮೂರ್ತಿ ಭಟ್ ನಿರೂಪಣೆ ಮಾಡಿದರು.

ಗಾಂಧೀಜಿ ಮೆಚ್ಚಿದ್ದ ಭಗವದ್ಗೀತೆ: ಬಿಎಸ್ವೈ

‘ಸಮಸ್ಯೆಗೆ ಪರಿಹಾರ ಕಾಣದೇ ಇದ್ದಾಗ ನಿರಾಸೆ ಕಾಡಿದಾಗ ಭಗವದ್ಗೀತೆ ಸಾಂತ್ವನ ಹೇಳುತ್ತದೆ. ಅದಕ್ಕಾಗಿಯೇ ಮಹಾತ್ಮ ಗಾಂಧೀಜಿ ಅವರು ಭಗವದ್ಗೀತೆಯನ್ನು ಶಾಶ್ವತ ತಾಯಿ ಎಂದು ಕರೆದಿದ್ದರು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದರು. ‘ಕುರುಕ್ಷೇತ್ರದಲ್ಲಿ ಅರ್ಜುನ ಗೊಂದಲದಲ್ಲಿ ಸಿಲುಕಿದ್ದಾಗ ಶ್ರೀಕೃಷ್ಣ ಗೀತೆಯನ್ನು ಬೋಧಿಸುವ ಮೂಲಕ ಪರಿಹಾರಗಳನ್ನು ಸೂಚಿಸಿದ್ದಾರೆ. ಗೀತೆ ಸನಾತನ ಹಿಂದುಗಳ ಪವಿತ್ರ ಗ್ರಂಥ. ಅನೇಕ ಸಾಧಕರು ಸಾಧು ಸಂತರು ಚಿಂತಕರು ಗೀತೆಯ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.