ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು (ಎನ್ಎಚ್), ಸ್ತನ ಕ್ಯಾನ್ಸರ್ ಜಾಗೃತಿ ದಿನದ ಭಾಗವಾಗಿ, ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ಯಶಸ್ವಿಯಾಗಿ ಹೊರಾಟ ನಡೆಸಿದವರ ವಿಶೇಷ ಸಮಾವೇಶ ನಡೆಸಲಿದೆ.

ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರ ನೇತೃತ್ವದಲ್ಲಿ ಕಳೆದ ಏಳು ತಿಂಗಳಿಂದ ಮಾಸಿಕ ಕ್ಯಾನ್ಸರ್ ಸರ್ವೈವರ್ಸ್ ಕ್ಲಿನಿಕ್ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಗೌರವ ಅತಿಥಿಯಾಗಿ ಶಿವಮೊಗ್ಗದ ಜೆಎನ್ಎನ್ಸಿಇ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕೆ. ಶೈಲಶ್ರೀ ‘ಶೇರಿಂಗ್ ಹೋಪ್–ದಿ ಸರ್ವೈವರ್ಸ್ ವಾಯ್ಸ್’ ವಿಷಯದ ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮದ ಬಗ್ಗೆ ವಿವರಿಸಿದ ಡಾ. ಅಪರ್ಣಾ, ಸ್ತನ ಕ್ಯಾನ್ಸರ್ ಆರೈಕೆ ಮತ್ತು ಚೇತರಿಕೆಯಲ್ಲಿ ದೃಢತೆ, ಹೊಸ ಆವಿಷ್ಕಾರ ಮತ್ತು ಬದುಕುಳಿದವರ ಧ್ವನಿಗೆ ಪ್ರೋತ್ಸಾಹ ನೀಡುವ ಸಂವಾದಾತ್ಮಕ ವೇದಿಕೆಯಾಗಿ ಅದನ್ನು ವಿನ್ಯಾಸಗೊಳಿಸಲಾಗಿದೆ. ಶಿವಮೊಗ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಭಾಗವಹಿಸಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್ ಪಿ.ಜಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9986759661.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.