ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸನಗರ | ಉರುಳಿ ಬಿದ್ದ ಬಸ್‌: ಹಲವರಿಗೆ ಗಾಯ

Published 1 ಜುಲೈ 2024, 15:22 IST
Last Updated 1 ಜುಲೈ 2024, 15:22 IST
ಅಕ್ಷರ ಗಾತ್ರ

ಹೊಸನಗರ: ರಾಣೆಬೆನ್ನೂರು–ಬೈಂದೂರು ಹೆದ್ದಾರಿಯ ಗಾಜನೂರು ಕ್ರಾಸ್ ಬಳಿ ಸೋಮವಾರ ಕೆಎಸ್ಆರ್‌ಟಿ ಬಸ್ ಮತ್ತು ಸಿಎಂಎಸ್ ವಾಹನ ಡಿಕ್ಕಿಯಾಗಿ ಬಸ್‌ ಉರುಳಿಬಿದ್ದು, ಹಲವರು ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಭಟ್ಕಳ ಕಡೆ ಸಾಗುತ್ತಿದ್ದ ಬಸ್, ನಿಟ್ಟೂರು ಬ್ಯಾಂಕಿಗೆ ಹಣ ಹಾಕಿ ಬರುತ್ತಿದ್ದ ಕೆನರಾ ಬ್ಯಾಂಕ್ ಸಿಎಂಎಸ್ ವಾಹನದ ನಡುವೆ ಬಪ್ಪನಮನೆ ಸಮಗೋಡು ನಡುವಿನ ಗಾಜನೂರು ಕ್ರಾಸ್‌ ಬಳಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಹೆದ್ದಾರಿ ಪಕ್ಕಕ್ಕೆ ಉರುಳಿದೆ. ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಎಎಸ್ಐ ಮಂಜುನಾಥ್ ಅವರು ಬಸ್ ಬಿದ್ದಿರುವುದನ್ನು ಕಂಡು ಠಾಣೆಗೆ ಮಾಹಿತಿ ನೀಡದರು. ಸ್ಥಳೀಯರ ಸಹಕಾರದಿಂದ ಬಸ್‌ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು.

ನಗರ ಪಿಎಸ್ಐ ರಮೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸ್‌ ಸಿಬ್ಬಂದಿ ವೆಂಕಟೇಶ್, ಶಾಂತಪ್ಪ, ಸುಜಯ್  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT