ಶಿವಮೊಗ್ಗ: ‘ಬಿ.ವೈ. ರಾಘವೇಂದ್ರ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಹೇಗೆ ಗೆಲ್ಲುತ್ತಾರೆಯೋ ನಾವು ನೋಡುತ್ತೇವೆ’ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಸವಾಲು ಹಾಕಿದರು.

‘ರಾಜ್ಯದಲ್ಲಿ ಸರ್ಕಾರವೇ ಸತ್ತುಹೋಗಿದೆ. ರೈತರು ಸಂಕಷ್ಟದಲ್ಲಿ ಇದ್ದರೂ ಸಂಸದರು, ಸಚಿವರು ಸೇರಿ ಅಭಿವೃದ್ಧಿಯನ್ನು ಮರೆತು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರೈತರ ಕಣ್ಣೀರು ಒರೆಸುವವರೇ ಇಲ್ಲವಾಗಿದೆ. ಅಡಿಕೆ, ಭತ್ತ, ಜೋಳ, ರಾಗಿ ಎಲ್ಲವೂ ಮಳೆಯಿಂದ ನಾಶವಾಗುತ್ತಿದೆ. ಆದರೂ, ಶಾಸಕರಾಗಲೀ, ಸಂಸದರಾಗಲೀ, ಅಧಿಕಾರಿಗಳಾಗಲೀ ಚಕಾರ ಎತ್ತುತ್ತಿಲ್ಲ. ರೈತರ ಶಾಪ ಇವರನ್ನು ತಟ್ಟದೇ ಬಿಡದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಟೀಕೆ ಮಾಡುವುದರಲ್ಲಿ ಯಾವ ಖುಷಿ ಸಿಗುತ್ತದೋ ಗೊತ್ತಿಲ್ಲ. ಆದರೂ ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮೂವರು ಮುಖ್ಯಮಂತ್ರಿಯಾಗುತ್ತಾರೆ. ಈಗಲೂ ಅದೇ ಆಗುತ್ತಿದೆ. ಯಡಿಯೂರಪ್ಪ ಅವಧಿ ಮುಗಿಯಿತು. ಸದ್ಯ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರ ಅವಧಿಯೂ ಮುಗಿಯುತ್ತಿದೆ. ಈಗ ಆ ಪಕ್ಷದ ಮುಖಂಡರೇ ಹೇಳುವಂತೆ ಮುರುಗೇಶ್ ನಿರಾಣಿ ಹೆಸರು ಕೇಳಿ ಬರುತ್ತಿದೆ’ ಎಂದು ವ್ಯಂಗ್ಯವಾಡಿದರು.

ನಾಗೇಶ್ ಡೋಂಗ್ರೆ ಅಮಾನತಿಗೆ ಆಗ್ರಹ: ‘ಸಂಸದ ಬಿ.ವೈ. ರಾಘವೇಂದ್ರ ಅವರ ಕೈಗೊಂಬೆಯಾಗಿರುವ ಸಹಕಾರ ಕ್ಷೇತ್ರದ ನಾಗೇಶ್ ಡೋಂಗ್ರೆ ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

‘ಬಿ.ವೈ. ರಾಘವೇಂದ್ರ ಹೇಳಿದ್ದನ್ನು ಕೇಳುವುದಷ್ಟೇ ನಾಗೇಶ್ ಡೋಂಗ್ರೆ ಅವರ ಕೆಲಸ. ಈತ ಸರ್ಕಾರಿ ಅಧಿಕಾರಿಯಲ್ಲ, ಬಿಜೆಪಿ ಏಜೆಂಟ್. ಈ ಅಧಿಕಾರಿಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ಮುಖಂಡರ ಆಶ್ರಯವಿದೆ. ಸಹಕಾರ ಕ್ಷೇತ್ರದಲ್ಲಿ 350ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅವರನ್ನೆಲ್ಲ ಹೆದರಿಸಿ ಬಿಜೆಪಿಗೆ ಮತ ಹಾಕುವಂತೆ
ಪ್ರೇರೇಪಿಸುವುದು, ಬಿಜೆಪಿ ಪರ ಇಲ್ಲದಿದ್ದರೆ ನೋಟಿಸ್ ನೀಡುವುದು ಈತನ ಕೆಲಸ. ಸಂಸದರ ಕೈಗೊಂಬೆಯಾಗಿರುವ ಈತ ಸಹಕಾರ ಕ್ಷೇತ್ರವನ್ನು ರಾಜಕೀಯಗೊಳಿಸುತ್ತಿದ್ದಾನೆ’ ಎಂದು ಆರೋಪಿಸಿದರು.

‘ಚುನಾವಣಾಧಿಕಾರಿ ಈ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಈತನ ವಿರುದ್ಧ ಇರುವ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸಬೇಕು. ಚುನಾವಣೆ ಮುಗಿಯುವವರೆಗೆ ಇವರನ್ನು ಚುನಾವಣಾ ಪ್ರಕ್ರಿಯೆಯಿಂದ ದೂರವಿಡಬೇಕು. ಇಲ್ಲದಿದ್ದರೆ ಈತನ ವಿರುದ್ಧ ಬೀದಿಗಿಳಿಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿಮುಲ್ ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್, ಬಿ.ಆರ್. ನಾಗರಾಜ್, ನವಿಲೇಶಪ್ಪ, ಬಸವನ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.