ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭದ್ರತೆಗಾಗಿ ಆರ್‌ಎಎಫ್‌ ಸೇವೆ ಅವಿಸ್ಮರಣೀಯ: ಬಿ. ವೈ ರಾಘವೇಂದ್ರ

Published 16 ಜೂನ್ 2023, 13:02 IST
Last Updated 16 ಜೂನ್ 2023, 13:02 IST
ಅಕ್ಷರ ಗಾತ್ರ

ಭದ್ರಾವತಿ: ದೇಶದ ಭದ್ರತೆಗಾಗಿ ಆರ್‌ಎಎಫ್‌ ಸೇವೆ ಅವಿಸ್ಮರಣೀಯವಾದುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ವಿಕಾಸ ಯಾತ್ರೆಯ ಅಂಗವಾಗಿ ನಗರದ ಮಿಲಿಟರಿ ಕ್ಯಾಂಪ್‌ನಲ್ಲಿರುವ ಆರ್‌ಎಎಫ್ ಘಟಕಕ್ಕೆ ಭೇಟಿ ನೀಡಿ ಅವರಿಂದ ಗೌರವ ಸ್ವೀಕರಿಸಿ, ನಂತರ ಏರ್ಪಡಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಏನೇ ಅಹಿತಕರ ಘಟನೆಗಳು, ಅನಾಹುತ, ಪ್ರಕೃತಿ ವಿಕೋಪ, ನೆರೆ, ಗಲಭೆ ಪ್ರಕರಣಗಳು ನಡೆದಾಗ, ಅಲ್ಲಿಗೆ ತಕ್ಷಣ ಆರ್‌ಎಎಫ್‌ ಸಿಬ್ಬಂದಿ ತೆರಳಿ ತಮ್ಮ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ಕೈಗೊಳ್ಳುತ್ತಾರೆ. ಗಲಭೆಪೀಡಿತ ಸ್ಥಳದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಇವರ ಸೇವೆ ಸಾರ್ಥಕ ಎಂದು ಶ್ಲಾಘಿಸಿದರು.

ನೂತನವಾಗಿ ಪ್ರಾರಂಭಗೊಂಡಿರುವ ಇಲ್ಲಿನ ಘಟಕಕ್ಕೆ ಅಗತ್ಯ ಮೂಲ ಸೌಕರ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಅಗತ್ಯ ಅನುದಾನದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಘಟಕದ ಅಧಿಕಾರಿಗಳಾದ ಸಿಬ್ಬಂದಿಯಾದ ಕಮಲೇಶ್ ಕುಮಾರ್, ಬಿ.ಸಿ. ರಾಯ್, ಪ್ರದೀಪ್ ಕುಮಾರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT