ಶಿವಮೊಗ್ಗ: ಜಾತಿ-ಧರ್ಮ ಯಾವುದೇ ಇರಲಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ. ಮಹಿಳೆಯರಿಂದ ಸಂಸ್ಕಾರ– ಸಂಸ್ಕೃತಿ ಜೀವಂತವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ವಿನೋಬ ನಗರದ ಶಿವಾಲಯದಲ್ಲಿ ಶನಿವಾರ ಜಂಗಮ ಮಹಿಳಾ ಸಮಾಜದ 7ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸರಿದಾರಿಯಲ್ಲಿ ನಡೆಯಲು ನಾರಿ ಶಕ್ತಿ ಕಾರಣ. ಈ ನಿಟ್ಟಿನಲ್ಲಿ ಜಿಲ್ಲಾ ಜಂಗಮ ಮಹಿಳಾ ಸಮಾಜ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

‘ಯಾವುದೇ ದೇವಾಲಯಗಳಿಗೆ ಪ್ರಭಾವಳಿ ಸೇರಿದಂತೆ ಅರ್ಚಕರು, ಜಂಗಮರು ಮುಖ್ಯ. ಅದೇ ರೀತಿ ನಮ್ಮ ದೇಶದ ಬಗ್ಗೆ ಪ್ರಪಂಚದಾದ್ಯಂತ ಗೌರವ ಸಿಗಲು ಭಾರತೀಯ ಸಂಸ್ಕೃತಿ ಕಾರಣ. ಇದರ ಹಿಂದೆ ಮಹಿಳೆಯರ ಶ್ರಮ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.

ಸಮಾಜದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷೆ ಎ.ಎಂ. ಪ್ರೇಮ ವೀರಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಜಂಗಮ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಸುಜಯ ಪ್ರಸಾದ್, ಪ್ರಮುಖರಾದ ಎಸ್.ಪಿ.ದಿನೇಶ್, ಬಳ್ಳಕೆರೆ ಸಂತೋಷ್, ಎ.ಎಂ.ಚಂದ್ರಯ್ಯ, ಲೋಕೇಶ್ ಎಚ್.ಎಂ.ದೊಡ್ಡಮಠ, ಪಾರ್ವತಮ್ಮ ಪಂಚಾಕ್ಷರಯ್ಯ, ಗಿರಿಜಮ್ಮ ಪ್ರಭುಕುಮಾರ್, ಶೈಲಜಾ ಜಯದೇವಯ್ಯ, ರೇಖಾ ವಾಗೀಶ್, ಸುಲೋಚನ ಪರಮೇಶ್ವರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.