ತೀರ್ಥಹಳ್ಳಿಯ ಚರ್ಚ್ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿ
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ನಡೆದ ಕ್ಯಾರೆಲ್ಸ್ ಸಂಭ್ರಮ
ತೀರ್ಥಹಳ್ಳಿಯ ಚರ್ಚ್ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿಯಲ್ಲಿ ಬಾಲ ಏಸುವನ್ನು ಫಾದರ್ ಪ್ರತಿಷ್ಠಾಪಿಸಿದರು
ತೀರ್ಥಹಳ್ಳಿಯಲ್ಲಿ ಡಿಸೆಂಬರ್ 21ರಂದು ಗೋದಲಿಯನ್ನು ಉದ್ಘಾಟಿಸಲಾಯಿತು

ಕ್ರಿಸ್ತ ಜಯಂತಿಯ 2025 ವರ್ಷಗಳ ಮಹಾ ಜುಬಲಿಯಲ್ಲಿ ನಾವಿದ್ದೇವೆ. ಕ್ರಿಸ್ತ ನಾಡಿಗೆ ಶಾಂತಿ ನೆಮ್ಮದಿ ಕೀರ್ತಿ ತರಲಿ.
ವ.ವೀರೇಶ್ ವಿಕ್ಟರ್ ಮೋರಸ್ ಧರ್ಮಗುರು ತೀರ್ಥಹಳ್ಳಿ ಧರ್ಮಕೇಂದ್ರಸಾಂತಾ ಕ್ಲಾಸ್ ಉದಾರತೆ ಪ್ರಚಾರ
ಕ್ಯಾರೆಲ್ಸ್ ಗುಂಪಿನಲ್ಲಿ ಕಾಣಿಸಿಕೊಳ್ಳುವ ಸಾಂತಾ ಕ್ಲಾಸ್ 4ನೇ ಶತಮಾನದಲ್ಲಿ ಗ್ರೀಕ್ ಪ್ರಾಂತ್ಯದಲ್ಲಿ ಬೋಹೆಮಿಯನ್ ಬಿಷಪ್ ಸೈಂಟ್ ನಿಕೋಲಸ್ ಮೂಲಕ ರೂಪುಗೊಂಡಿದೆ. ಬಿಷಪ್ ತಮ್ಮ ಉದಾರತೆಗೆ ಹೆಸರುವಾಸಿಯಾಗಿದ್ದರು. ಅವರು ರಹಸ್ಯವಾಗಿ ಉಡುಗೊರೆಯನ್ನು ನೀಡುವ ಅಭ್ಯಾಸವನ್ನು ಹೊಂದಿದ್ದರು. ಯೂರೋಪ್ ದೇಶದಲ್ಲಿ ಮೈಕೊರೆಯುವ ಚಳಿ ಹಾಗೂ ಹಿಮವರ್ಷದಿಂದ ಕೂಡಿದ ವಾತಾವರಣದಲ್ಲಿ ಬಡಜನರು ನಿರ್ಗತಿಕರು ಹಸಿವಿನಿಂದ ಬಳಲುವಾಗ ಅವರಿಗೆ ಆಹಾರ ಹೊದಿಕೆಗಳನ್ನು ನಿಡುತ್ತಿದ್ದರು ಎಂಬ ಪ್ರತೀತಿ ಇದೆ. ಅದೇ ಮುಂದೆ ಸಾಂತಾ ಕ್ಲಾಸ್ ಪರಿಕಲ್ಪನೆಗೆ ನಾಂದಿಯಾಯಿತು.