ಭಾನುವಾರ, ಜೂನ್ 13, 2021
26 °C
1797 ಜನರಿಗೆ ಪರೀಕ್ಷೆ, 179 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಶಿವಮೊಗ್ಗ: ಪರೀಕ್ಷೆ ಜತೆ ಸೋಂಕಿತರ ಪ್ರಮಾಣವೂ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಒಂದೇ ದಿನ 1797 ಜನರಿಗೆ ಪರೀಕ್ಷೆ ನಡೆಸಲಾಗಿದ್ದು 179 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 5236ಕ್ಕೆ ತಲುಪಿದೆ.

ಗುರುವಾರ 35 ಜನರು ಸೇರಿದಂತೆ 2985 ಜನರು ಗುಣಮುಖರಾಗಿದ್ದಾರೆ. 2167 ಮಂದಿ ವಿವಿಧ ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗ ನಗರದಲ್ಲೇ 114 ಜನರಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 31, ಶಿಕಾರಿಪುರದಲ್ಲಿ 11, ತೀರ್ಥಹಳ್ಳಿಯಲ್ಲಿ 01, ಹೊಸನಗರದಲ್ಲಿ 2, ಸೊರಬ 7, ಸಾಗರದಲ್ಲಿ 6  ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ಹೊರಜಿಲ್ಲೆಯ 7 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.

11 ಮಂದಿಗೆ ಕೊರೊನಾ ಸೋಂಕು (ಶಿಕಾರಿಪುರ ವರದಿ)

ತಾಲ್ಲೂಕಿನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ.

ಪಟ್ಟಣದ ಶಾಂತಿನಗರ ನಿವಾಸಿ ಪುರುಷನಿಗೆ, ಜಟ್ ಪಟ್ ನಗರದ ನಿವಾಸಿ ಮೃತ ಪುರುಷನಿಗೆ, ಮುದಿಗೌಡ್ರು ಕೇರಿ ನಿವಾಸಿ ಪುರುಷನಿಗೆ, ತಾಲ್ಲೂಕಿನ ಗಾಂಧಿನಗರ ಗ್ರಾಮದ ಮೂವರು ಮಹಿಳೆಯರಿಗೆ, ಇಬ್ಬರು ಪುರುಷರಿಗೆ, ತಾಳಗುಂದ ಗ್ರಾಮದ ಮಹಿಳೆಗೆ, ಅಂಬಾರಗೊಪ್ಪ ಗ್ರಾಮದ ಪುರುಷನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

6 ಮಂದಿಗೆ ಸೋಂಕು (ಸಾಗರ ವರದಿ)

ಸಾಗರ: ತಾಲ್ಲೂಕಿನಲ್ಲಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದ ಜೋಗ ರಸ್ತೆಯ 28 ವರ್ಷದ ಪುರುಷ, 21 ವರ್ಷದ ಮಹಿಳೆ, ಗುಡ್ಡೇಮನೆ ಗ್ರಾಮದ 51 ವರ್ಷದ ಪುರುಷ, ಅಂಬಾಪುರದ 47 ವರ್ಷದ ಪುರುಷ, 9 ವರ್ಷದ ಬಾಲಕ ಸೋಂಕಿತರಾಗಿದ್ದಾರೆ. ಕಾನ್ಲೆ, ಹಾಗಲಪುರ, ಮುರುಘಾಮಠ, ಆನಂದಪುರಂ ಗ್ರಾಮಗಳಲ್ಲೂ ತಲಾ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ನಾಲ್ಕು ವರ್ಷದ ಮಗುವಿಗೆ ಸೋಂಕು (ತೀರ್ಥಹಳ್ಳಿ ವರದಿ): ತೀರ್ಥಹಳ್ಳಿ ಪಟ್ಟಣದ 55 ವರ್ಷದ ಪುರುಷ ಹಾಗೂ ಮಂಡಗದ್ದೆಯ 4 ವರ್ಷದ ಮಗು ಹಾಗೂ 35 ವರ್ಷದ ವ್ಯಕ್ತಿ ಗೆ ಕೊರೊನಾ ಸೋಂಕು ಇದುವುದು ದೃಢಪಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು