ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ: ಮುಪ್ಪಾನೆ ತೀರದಲ್ಲಿ ಮೀನುಗಳ ಸಾವು

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ
Last Updated 12 ಜೂನ್ 2022, 5:53 IST
ಅಕ್ಷರ ಗಾತ್ರ

ಕಾರ್ಗಲ್: ಶರಾವತಿ ಹಿನ್ನೀರಿನ ಮುಪ್ಪಾನೆ, ಕಟ್ಟಿನಕಾರು ತೀರಗಳಲ್ಲಿ ನೂರಾರು ಮೀನುಗಳು ಶುಕ್ರವಾರ ಸತ್ತಿದ್ದು, ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿರುವ ಪ್ರಾದೇಶಿಕ ಜಾತಿಯ ಹೊಳೆ ಮೀನುಗಳಾದ ಹಾವು ಮೀನು, ಗೊಜಲೆ, ಕೊಡಸ, ಜಬ್ಬು ಮುಂತಾದ ಸಣ್ಣ ಜಾತಿಯ ಮೀನುಗಳು ಹೆಚ್ಚಾಗಿ ಸಾಯುತ್ತಿವೆ. ಅವುಗಳ ಜೊತೆಯಲ್ಲಿಯೇ ಇರುವ ಕಾಟ್ಲಾ, ಗೌರಿ, ಫಾರಂ ಮೀನುಗಳಿಗೆ ಯಾವುದೇ ರೀತಿಯ ತೊಂದರೆ ಕಂಡುಬಂದಿಲ್ಲ.

ಬೇಸಿಗೆ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ಒಳವೆಗಳಲ್ಲಿ ಮೀನುಗಳಿಗೆ ಆಹಾರ ಹಾಗೂ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ. ಮುಂಗಾರು ಮಳೆ ಆರಂಭದಲ್ಲಿ ಭೂಮಿಯ ಮೇಲಿನ ದೂಳು ಹಳ್ಳಗಳಿಗೆ ಸೇರುತ್ತದೆ. ಇದರಿಂದ ಮೀನುಗಳು ಸತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಒಂದು ವರ್ಗದ ಮೀನುಗಳಿಗೆ ಕಡಿಮೆಯಾದ ನೀರಿನಿಂದ ಸೋಂಕು ತಗುಲಿದ್ದು, ಈ ಪ್ರಮಾಣದಲ್ಲಿ ಸಾಯಲು ಕಾರಣವಾಗಿದೆ.ಈ ಬಗ್ಗೆ ಮೀನುಗಳಿಗೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಉತ್ತಮವಾಗಿ ಮಳೆ ಸುರಿಯುವುದೊಂದೇ ಇದಕ್ಕಿರುವ ಪರಿಹಾರ’ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ‘ಪ್ರಜಾವಾಣಿ’ಗೆತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT