ಶಿವಮೊಗ್ಗ: ‘ದೇವರಾಜ ಅರಸು ಬಗ್ಗೆ ಇರುವಷ್ಟು ಬರಹ, ಪುಸ್ತಕಗಳು ಬೇರೆ ಯಾವ ರಾಜಕಾರಣಿಗಳ ಬಗ್ಗೆಯೂ ಇರಲಿಕ್ಕಿಲ್ಲ. ಇದು ಜನಮಾನಸದಲ್ಲಿ ಅವರ ಕಾಡುವಿಕೆಗೆ ಸಾಕ್ಷಿ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಿರಿಯ ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಜನಪ್ರಾತಿನಿಧ್ಯಕ್ಕೆ ನಿರಂತರವಾಗಿ ಹೊಸ ಭಾಷ್ಯ ಬರೆಯುತ್ತಾ ಬಂದ ದೇವರಾಜ ಅರಸು ರಾಜ್ಯದ ಅಸ್ಮಿತೆ. ಅವರ ಜನ್ಮದಿನ ನಾಡಿನ ಆತ್ಮಾವಲೋಕನದ ದಿನವಾಗಬೇಕು’ ಎಂದರು.

ಸಂವಿಧಾನವನ್ನು ಅರಿತು ಅರಸು ನಿಜವಾದ ಸಾಂಸ್ಕೃತಿಕ ರಾಜಕಾರಣ ನಡೆಸಿದರು. ಮುಖ್ಯಮಂತ್ರಿ ಆಗಿ ಹಲವಾರು ಸಂಕಟಗಳ ನುಂಗಿ ಸಾಗಿದರು. 1972ರಲ್ಲಿ ಟಿಕೆಟ್ ಹಂಚುವ ಅಧಿಕಾರ ದೊರೆತಾಗ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಪ್ರಬಲರಲ್ಲದವರನ್ನು ನಿಲ್ಲಿಸಿ ಗೆಲ್ಲಿಸಿದರು.

ಜೀತ ನಿಷೇಧ, ವಿದ್ಯಾರ್ಥಿಗಳ ಕಲ್ಯಾಣ ಯೋಜನೆ, ಮಲಹೊರುವ ಪದ್ಧತಿ ನಿಷೇಧ, ಉಳುವವನೇ ಭೂಮಿ ಒಡೆಯ, ಗರೀಬಿ ಹಠಾವೋ, ಭಾಗ್ಯಜ್ಯೋತಿ, ಕನಿಷ್ಟ ಕೂಲಿ ನಿಗದಿ, ಋಣ ಪರಿಹಾರ, ಹೀಗೆ ನೊಂದವರಿಗೆ ಜನಪರ ಕಲ್ಯಾಣ ಯೋಜನೆಗಳ ಜಾರಿಗೆ ತಂದರು. ನಾಡು ಎಂಬುದು ಪ್ರದೇಶವೊಂದರ ರೂಪಕ ಆಗಬಾರದು ಎಂಬ ಕಾರಣಕ್ಕೆ ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಹಿಂದುಳಿದವರು, ನೊಂದವರ ಏಳ್ಗೆಗಾಗಿ ಶ್ರಮಿಸಿದ ಕ್ರಾಂತಿ ಪುರುಷ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹೇಳಿದರು.

12 ನೇ ಶತಮಾನದಲ್ಲಿ ಹೇಗೆ ದಮನಿತರು, ಹಿಂದುಳಿದವರನ್ನು ಮುಂಚೂಣಿಗೆ ತರಲು ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕ್ರಾಂತಿ ನಡೆಸಿದರೋ ಅದೇ ರೀತಿ ಅರಸು ಮುಖ್ಯಮಂತ್ರಿಯಾಗಿ ಸಂವಿಧಾನದ ಆಶಯಗಳನ್ನು ಅನುಷ್ಟಾನಗೊಳಿಸಿದ್ದಾರೆ ಎಂದರು.

ಹಿಂದುಳಿದ ಜಾತಿ ಒಕ್ಕೂಟದ ಅಧ್ಯಕ್ಷ ವಿ. ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಆರ್.ಶೋಭಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಎಸ್ಪಿ ಎಸ್. ರಮೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಸುಜಾತಾ ಹಾಜರಿದ್ದರು.

ಅರಸು ಮುಂದಾಲೋಚನೆಯಿಂದಾಗಿ ಶೋಷಿತರು ರಾಜ್ಯಾದ್ಯಂತ ಹಾಸ್ಟೆಲ್ ಸೌಲಭ್ಯ ಪಡೆದು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಭೂ ಸುಧಾರಣೆ ಕಾಯ್ದೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಭೂಮಿ ಲಭಿಸಿದೆ.
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ವಿವಿಧ ಕ್ಷೇತ್ರಗಳ ಸಾಧಕರು ಪ್ರತಿಭಾನಿತ್ವರಿಗೆ ಸನ್ಮಾನ..

ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರು ಪ್ರಬಂಧ ರಸಪ್ರಶ್ನೆ ಕ್ರೀಡಾ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳನ್ನು ಇದೇ ವೇಳೆ ಗೌರವಿಸಲಾಯಿತು. ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ ಡಿ.ಶಂಕರಪ್ಪ ಬಿ.ಎ ಉಮಾಪತಿ ಇಕ್ಬಾಲ್ ಹಬೀಬ್ ಸೇಠ್ ಅಶೋಕ್ ಕಲಾವಿದರಾದ ಎಂ.ಯಲ್ಲಪ್ಪ ಭಾಗವತ್ ಸಿ.ಎಸ್.ಗರಗ್ ಮಂಜುನಾಥ ಸ್ವಾಮಿ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಆರ್.ವಂದನಾ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಸದ್ಬಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.