ಸಂಪುಟ ಸಭೆಯಲ್ಲಿ ಡಿ.ಕೆ.ಶಿ ಧ್ವನಿ ಎತ್ತಬೇಕಿತ್ತು
ಧರ್ಮಸ್ಥಳ ಕ್ಷೇತ್ರದ ಪರವಾಗಿ ಜನಾಭಿಪ್ರಾಯ ಕ್ರೋಢಿಕರಣವಾಗುತ್ತಿರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಪರವಾಗಿ ಮಾತನಾಡುತ್ತಿದ್ದಾರೆ. ವಾಸ್ತವದಲ್ಲಿ ಎಸ್ಐಟಿ ರಚನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗಲೇ ಅವರು ಧ್ವನಿ ಎತ್ತಬೇಕಿತ್ತು. ಎಸ್ಐಟಿ ರಚನೆಗೆ ಬೆಂಬಲ ಕೊಟ್ಟು ಈಗ ಧರ್ಮಸ್ಥಳದ ಪರವಾಗಿ ಮಾತನಾಡುವುದು ರಾಜಕೀಯ ಇಬ್ಬಂದಿತನದ ಧೋರಣೆಯಾಗಿದೆ ಎಂದು ಎಚ್.ಹಾಲಪ್ಪ ಹರತಾಳು ಟೀಕಿಸಿದರು.