ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ: ತಲೆನೋವಾದ ನಕಲಿ ಕಾರ್ಮಿಕರ ಕಾರ್ಡ್ ವಿತರಣೆ ಜಾಲ

ಜಿಲ್ಲೆಯ ಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ವಿತರಣೆ: ಕಾರ್ಮಿಕ ಇಲಾಖೆಯಿಂದ ಪತ್ತೆ
Published : 2 ಡಿಸೆಂಬರ್ 2024, 6:36 IST
Last Updated : 2 ಡಿಸೆಂಬರ್ 2024, 6:36 IST
ಫಾಲೋ ಮಾಡಿ
Comments
ನಕಲಿ ಲೇಬರ್ ಕಾರ್ಡ್ ವಿತರಣೆ ಮಾಡಿ ಕಾರ್ಮಿಕರನ್ನು ವಂಚಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ನಕಲಿ ಕಾರ್ಡ್‌ ಕೊಡುವುದು ಕಂಡುಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು
ಎಂ.ಪಿ. ವೇಣುಗೋಪಾಲ್ ಜಿಲ್ಲಾ ಕಾರ್ಮಿಕ ಅಧಿಕಾರಿ ಶಿವಮೊಗ್ಗ
ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು..
ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನಲ್ಲಿ ನಕಲಿ ಕಾರ್ಮಿಕ ಕಾರ್ಡ್‌ ವಿತರಣೆಯಾಗಿರುವುದನ್ನು ಕಾರ್ಮಿಕ ಇಲಾಖೆ ಪತ್ತೆ ಮಾಡಿದೆ. ನಕಲಿ ಸಹಿ ಗಮನಕ್ಕೆ ಬರುತ್ತಲೇ ಕಾರ್ಮಿಕ ನಿರೀಕ್ಷಕ ಕೃಷ್ಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಲೇಬರ್‌ ಕಾರ್ಡ್‌ ವಿತರಿಸುತ್ತಿರುವವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸಾರ್ವಜನಿಕರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಅಥವಾ ಆಯಾಯ ತಾಲ್ಲೂಕುಗಳ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮಾಹಿತಿ ನೀಡಬೇಕು ಎಂದು ವೇಣುಗೋಪಾಲ್ ಮನವಿ ಮಾಡಿದ್ದಾರೆ.
ಅನರ್ಹ ಕಾರ್ಡ್ ಪತ್ತೆ ಕಾರ್ಯ ಮುಂದುವರಿಕೆ
ಶಿವಮೊಗ್ಗ ಜಿಲ್ಲೆಯಲ್ಲಿ 187034 ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ನೋಂದಣಿ ಮಾಡಿಸಿ ಕಾರ್ಡ್ ಪಡೆದಿದ್ದಾರೆ. ಕಾರ್ಮಿಕ ಇಲಾಖೆ ಈಚೆಗೆ ಪರಿಶೀಲನೆ ಆರಂಭಿಸಿದ್ದು ನಕಲಿ ಕಾರ್ಡ್ ಪತ್ತೆ ಕಾರ್ಯ ಮುಂದುವರಿದಿದೆ. ಅನರ್ಹರಿಗೆ ಕಾರ್ಮಿಕರ ಕಾರ್ಡ್ ವಿತರಣೆ ಆಗಿದ್ದಲ್ಲಿ ಅವುಗಳನ್ನು ಪತ್ತೆ ಮಾಡಿ ರದ್ದುಪಡಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು. ಶಿವಮೊಗ್ಗ 1 ಮತ್ತು 2ನೇ ವೃತ್ತದಲ್ಲಿ ಕ್ರಮವಾಗಿ 26842 ಹಾಗೂ 19108 ಕಾರ್ಮಿಕರ ಕಾರ್ಡ್‌ಗಳ ವಿತರಣೆ ಮಾಡಲಾಗಿದೆ. ಭದ್ರಾವತಿ 1 ಮತ್ತು 2ನೇ ವೃತ್ತದಲ್ಲಿ 10364 ಹಾಗೂ 20353 ಸಾಗರದಲ್ಲಿ 27364 ಸೊರಬದಲ್ಲಿ 24666 ಶಿಕಾರಿಪುರದಲ್ಲಿ 24895 ಹೊಸನಗರದಲ್ಲಿ 16693 ತೀರ್ಥಹಳ್ಳಿಯಲ್ಲಿ 12789 ಕಾರ್ಡ್‌ಗಳ ವಿತರಣೆಯಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT