ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜದ ಏಳಿಗೆಗೆ ಶಿಕ್ಷಣವೇ ಅಡಿಗಲ್ಲು

–ಗಂಗಾಮತ ವಿದ್ಯಾರ್ಥಿಗಳಿಗಾಗಿ ನೀಡುತ್ತಿರುವ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Published : 30 ಜುಲೈ 2023, 14:39 IST
Last Updated : 30 ಜುಲೈ 2023, 14:39 IST
ಫಾಲೋ ಮಾಡಿ
Comments

ಶಿವಮೊಗ್ಗ: ಹಿಂದುಳಿದ ಸಮಾಜಗಳ ಏಳಿಗೆಗೆ ಶಿಕ್ಷಣವೇ ಅಡಿಗಲ್ಲು ಎಂದು ರಾಜ್ಯ ಗಂಗಾಮತ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಹಾಲೇಶಪ್ಪ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಗಂಗಾಮತ ಸಂಘ, ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಉಡುಪಿ ಅಂಬಾಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗಂಗಾಮತ ವಿದ್ಯಾರ್ಥಿಗಳಿಗಾಗಿ ನೀಡುತ್ತಿರುವ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಂಗಾಮತ ಸಮಾಜ ಎಲ್ಲಾ ರಂಗಗಳಲ್ಲಿಯೂ ಇದೆ. ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ಉದ್ಯಮಿ ಜಿ.ಶಂಕರ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ತಮ್ಮ ಟ್ರಸ್ಟ್ ವತಿಯಿಂದ ಶಿವಮೊಗ್ಗ ಜಿಲ್ಲೆಗೆ ₹5 ಲಕ್ಷ ನೀಡುತ್ತಿದ್ದಾರೆ. ಇದು ಸ್ವಾಗತದ ವಿಷಯವಾಗಿದೆ ಎಂದರು.

ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘವೂ ಕೂಡ ‘ಗಂಗಾ ವಿದ್ಯಾಸಿರಿ’ ಎಂಬ ಯೋಜನೆ ರೂಪಿಸಿದೆ. ಈಗಾಗಲೇ ₹25 ಲಕ್ಷಗಳನ್ನು ಬ್ಯಾಂಕ್‌ನಲ್ಲಿ ಇಡಲಾಗಿದೆ. ಇನ್ನೂ ₹25 ಲಕ್ಷ ಶೀಘ್ರವೇ ದಾನಿಗಳಿಂದ ಸಂಗ್ರಹಿಸಿ ಜೊತೆಗೆ ಜಿ.ಶಂಕರ್ ಅವರ ನೆರವು ಪಡೆದು ₹1 ಕೋಟಿ ಹಣವನ್ನು ಬ್ಯಾಂಕ್ ನಲ್ಲಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವು ನೀಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಚಂದ್ರಶೇಖರ್ ಹೇಳಿದರು.

ಜಿಲ್ಲಾ ಗಂಗಾಮತ ಸಮಾಜವು ಸಮಾಜದ ಸಂಘಟನೆಗೆ ಕೆಲಸ ಮಾಡುತ್ತಿದೆ. ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಡಿ.ಬಿ. ಕೆಂಚಪ್ಪ ಹೇಳಿದರು.

ಗಂಗಾಮತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಸತ್ಯನಾರಾಯಣ್, ಆನಂದ್, ವೀರೇಶ್ ಮೇಸ್ತ್ರಿ, ದೇಸಾಯಿ ರಾಯಚೂರು, ಫಲವನಹಳ್ಳಿ ತಿಮ್ಮಪ್ಪ, ಅಶೋಕ್ ಕುಮಾರ್, ಸತೀಶ್, ಶ್ರೀಶೈಲ, ರವಿ, ಗಂಗಾಧರ್, ಬ್ಯಾಣದ್,ಎಲ್ ಪಿ ರಂಗನಾಥ್, ಶೇಖರಪ್ಪ, ಯಲ್ಲಪ್ಪ, ಕೆಂಚಪ್ಪ, ಪರಮೇಶ್ವರಪ್ಪ, ಜನಾರ್ದನ ವೇದಿಕೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT