ಸ್ಮಶಾನಕ್ಕೆ ಹೋದ ಶವ ಮತ್ತೆ ಆಸ್ಪತ್ರೆಗೆ ರವಾನೆ!

ಶಿವಮೊಗ್ಗ: ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬರ ಶವವನ್ನು ಸ್ಮಶಾನದಿಂದ ನಗರದ ಮೆಗ್ಗಾನ್ ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸಮೀಪದ ಲಕ್ಕಿನಕೊಪ್ಪದ ಕಾಡಿನಲ್ಲಿ ಬೆಳಿಗ್ಗೆ ಉರುಳಿಹಳ್ಳಿ ಮಾರುತಿ ಕ್ಯಾಂಪ್ ನಿವಾಸಿ ವಿಠಲ ಮತ್ತು ಅತನ ಸ್ನೇಹಿತ ಇಬ್ವರು ಕುಡಿದು ಮಲಗಿದ್ದಾರೆ. ವಿಠಲನ ಸ್ನೇಹಿತ ಜೊತೆಯಲ್ಲಿ ಮಲಗಿದ್ದವನು ಎದ್ದು ಗ್ರಾಮಕ್ಕೆ ತೆರಳಿದ್ದು, ವಿಠಲ ಎದ್ದು ಬಂದಿಲ್ಲ.
ಗ್ರಾಮಸ್ಥರೊಬ್ಬರು ಕಾಡಿಗೆ ತೆರಳಿದಾಗ ವಿಠಲನ ಶವ ಪತ್ತೆಯಾಗಿದೆ. ಆತನ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಕುಟುಂಬದವರೂ ಬಂದಿದ್ದಾರೆ. ಹೆಚ್ಚು ಕುಡಿತದಿಂದ ಆತ ಸತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಅಂತ್ಯ ಸಂಸ್ಥಾರಕ್ಕೆ ಗ್ರಾಮದ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದಿದ್ದಾರೆ.
ಆದರೆ, ಗ್ರಾಮಸ್ಥರೊಬ್ಬರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಂಗನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಂತ್ಯ ಸಂಸ್ಕಾರವನ್ನ ತಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.