ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನಕೇರಿ ಸಾಹಿತ್ಯ ಪ್ರೀತಿ ಅನನ್ಯ: ವಿಜಯಕುಮಾರ ಸ್ವಾಮೀಜಿ

Last Updated 17 ಸೆಪ್ಟೆಂಬರ್ 2020, 14:43 IST
ಅಕ್ಷರ ಗಾತ್ರ

ಶಿವಮೊಗ್ಗ: ಜಯದೇವಪ್ಪ ಜೈನಕೇರಿ ಅವರು ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಾಹಿತ್ಯ ಚಟುವಟಿಕೆ, ಕಾರ್ಯಕ್ರಮಗಳನ್ನು ರಾಜ್ಯವ್ಯಾಪಿ ವಿಸ್ತರಿಸಿದ್ದರು ಎಂದುಜೋಗದ ಪ್ರಭುದೇವ ಧರ್ಮ ಪೀಠದಡಾ.ವಿಜಯಕುಮಾರ ಸ್ವಾಮೀಜಿ ಬಣ್ಣಿಸಿದ್ದಾರೆ.

ಜಿಲ್ಲೆಯವರೇ ಆದಅಲ್ಲಮ ಪ್ರಭು ದೇವರು, ಅಕ್ಕಮಹಾದೇವಿಅವರ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ರಾಜ್ಯದ ಎಲ್ಲೆಡೆ ವಚನ ಸಾಹಿತ್ಯದ ಕಂಪು ಪಸರಿಸಿದರು. ಇಂತಹ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಮೂಲತಃ ವ್ಯಾಪಾರಿಯಾಗಿದ್ದರೂ ಅವರ ಸಾಹಿತ್ಯ ಪ್ರೀತಿ ಅನನ್ಯ ಎಂದು ಸ್ಮರಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಸಹಪಾಠಿಯಾಗಿದ್ದ ಅವರುವರ್ಷಕ್ಕೆ ಕನಿಷ್ಠ ಒಂದುಪುಸ್ತಕ ಬರೆದು ಪ್ರಕಟಿಸುತ್ತಿದ್ದರು. ಜೋಗದ ಪ್ರಭುದೇವ ಧರ್ಮ ಪೀಠಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ನಡೆ ಇತರರಿಗೂ ಮಾದರಿ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT