ಹೊಳೆಹೊನ್ನೂರು: ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಾಗುತ್ತದೆ ಎಂದು ಭದ್ರಾವತಿ ಕ್ಷೇತ್ರ ಶಿಕ್ಷಣ ಅಧಿಕಾರಿ ಎ.ಕೆ. ನಾಗೇಂದ್ರಪ್ಪ ಹೇಳಿದರು.

ಸಮೀಪದ ಅರಹತೊಳಲು ಕೈಮರದ ಜ್ಞಾನ ಸಂಗಮ ಎಜುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನ ಇನ್ಸ್ಪೈರ್ ಆ್ಯಂಡ್ ಎಕ್ಸ್ಪ್ಲೋರ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡುವುದರಿಂದ ಅವರು ಬುದ್ದಿವಂತರಾಗುವುದಿಲ್ಲ. ಪಾಠದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಚಟುವಟಿಕೆಗಳು ನಿಯಮಿತವಾಗಿ ಸಿಕ್ಕಾಗ ಮನಸ್ಸು ತಿಳಿಯಾಗುತ್ತದೆ. ಆಗ ವಿದ್ಯಾರ್ಥಿಗಳಿಗೆ ಓದಿನ ಮೇಲೆ ಆಸಕ್ತಿ ಬೆಳೆಯುತ್ತೆ. ಮನೆಯಲ್ಲಿ ಪೋಷಕರು ಮಕ್ಕಳ ಆಸಕ್ತಿಗಳನ್ನು ಅರಿತು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಜ್ಞಾನ ಸಂಗಮ ಸಂಸ್ಥೆ ಕೇವಲ ನಾಲ್ಕು ವರ್ಷದ ಶಿಶು. ಇಂದು ಬೃಹದಾಕಾರವಾಗಿ ಬೆಳೆಯಲು ಶಾಲೆಯ ಬೋಧಕ ವರ್ಗ ಮತ್ತು ಈ ಬಾಗದ ಪೋಷಕರ ಸಹಕಾರ ಕಾರಣವಾಗಿದೆ. ನಗರ ಪ್ರದೇಶಗಳ ವಿದ್ಯಾರ್ಥಿಗಳ ಜೊತೆ ಪೈಪೋಟಿ ನಡೆಸುವ ಸಂದರ್ಭಗಳು ಎದುರಾಗುತ್ತಿವೆ. ಆದ್ದರಿಂದ ನಮ್ಮ ಶಾಲೆಯಲ್ಲಿ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಾಠ ಪ್ರವಚನಗಳ ಜೊತೆಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗುವುದು ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಆರ್. ಈಶ್ವರಪ್ಪ ಹೇಳಿದರು.

ಸಿದ್ದಪ್ಪಗೌಡ, ಕಾರ್ಯದರ್ಶಿ ಎಸ್. ಮಲ್ಲೇಶ್, ಸಿದ್ದಾಪುರದ ಎಂಡಿಆರ್ಎಸ್ ಶಾಲೆಯ ಪ್ರಾಚಾರ್ಯ ಗಣೇಶ್, ಆಡಳಿತ ಮಂಡಳಿ ಉಪಾಧ್ಯಕ್ಷೆ ಏಕಾಂತಮ್ಮ, ಎನ್.ಪಿ. ಶಕುಂತಲಾ, ಲಕ್ಷ್ಮಿಅಂಗಡಿ, ಜಿ.ಎಸ್. ಏಳುಕೋಟಿ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ, ಗ್ರಾ. ಪಂ. ಉಪಾಧ್ಯಕ್ಷ ಕೆ.ರಂಗನಾಥ, ಸದಸ್ಯ ಎನ್.ಟಿ.ಸಂಗನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.