ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ಕ್ಕೆ ಅಭಿಮಾನದ ಅಭಿನಂದನೆ ‘ನಮ್ಮೊಲುಮೆ’

ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಗೌರವ
Last Updated 19 ಫೆಬ್ರುವರಿ 2021, 3:11 IST
ಅಕ್ಷರ ಗಾತ್ರ

ಶಿವಮೊಗ್ಗ: ಹಳೇ ಕಾರಾಗೃಹದ ಚಂದ್ರಶೇಖರ ಆಜಾದ್‌ ಮೈದಾನದಲ್ಲಿ ಫೆ.28ರಂದು ಸಂಜೆ 6ಕ್ಕೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿಮಾನದ ಅಭಿನಂದನಾ ಕಾರ್ಯಕ್ರಮ ‘ನಮ್ಮೊಲುಮೆ’ ಆಯೋಜಿಸಲಾಗಿದೆ.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ, ರಸ್ತೆಗಳು, ಸೇತುವೆಗಳು, ಹೊಸ ರೈಲು ಮಾರ್ಗಗಳು, ರೈಲು ಸೇತುವೆಗಳ ನಿರ್ಮಾಣ, ಜಿಲ್ಲಾ
ಡಳಿತ ಭವನ, ಬಸ್‌ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆಯುಷ್ ವಿಶ್ವವಿದ್ಯಾಲಯಕ್ಕೆ ₹ 10 ಕೋಟಿ ಬಿಡುಗಡೆ ಮಾಡಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ಪಕ್ಷಾತೀತವಾಗಿ ಸನ್ಮಾನಿಸಲು ಜಿಲ್ಲೆಯ ಜನರು ನಿರ್ಧರಿಸಿದ್ದಾರೆ’ ಎಂದು ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಿತಿಯ ಮುಖ್ಯಸ್ಥ ಎಸ್.ಎಸ್. ಜ್ಯೋತಿಪ್ರಕಾಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ‘ಮುಖ್ಯಮಂತ್ರಿ ಸನ್ಮಾನದ ನಂತರ ಗಾಯಕರಾದ ವಿಜಯ್‌ ಪ್ರಕಾಶ್ಹಾಗೂ ರಾಜೇಶ್‌ ಕೃಷ್ಣನ್ ಅವರಿಂದ ವಿಶೇಷ ಸಂಯೋಜನೆಯ ‘ಭಾವಾಭಿನಂದನಾ’ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಲಾವಿದೆ ಅನುಶ್ರೀ ನಿರೂಪಿಸುವರು’ ಎಂದು ವಿವರನೀಡಿದರು.

ಮಾರ್ಚ್‌ 1ರಂದು ಸಂಜೆ 6ಕ್ಕೆ ಇದೇ ಸ್ಥಳದಲ್ಲಿ ಆಳ್ವಾಸ್ ನುಡಿಸಿರಿ ತಂಡ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಸಿಕೊಡಲಿದೆ. ಈ ಕಾರ್ಯಕ್ರಮದಲ್ಲಿ 250 ಕಲಾವಿದರುಭಾಗವಹಿಸುವರು. ಎರಡುದಿನಗಳ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಇದೆ. ಕೋವಿಡ್ ನಿಯಮ
ಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ವಕೀಲ ಬಸವನಗೌಡ, ಸಮಿತಿ ಮುಖಂಡರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎ.ಜೆ. ರಾಮಚಂದ್ರ, ಬಳ್ಳೆಕೆರೆ ಸಂತೋಷ್, ಲಕ್ಷ್ಮಿನಾರಾಯಣ ಕಾಶಿ, ರಮೇಶ್‌ ಹೆಗ್ಡೆ, ಮಾಲತೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT