ಶನಿವಾರ, ನವೆಂಬರ್ 28, 2020
25 °C

ಶಾರ್ಟ್‌ ಸರ್ಕಿಟ್‌: ತಿನಿಸು ಪದಾರ್ಥಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಶಾರ್ಟ್‌ ಸರ್ಕಿಟ್‌ನಿಂದ ಶುಕ್ರವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಡಿಪೊ ಎದುರಿನ ತಿನಿಸು ಪದಾರ್ಥಗಳ ಮಳಿಗೆ ಸುಟ್ಟು ಹೋಗಿದೆ. ಅಪಾರ ನಷ್ವವಾಗಿದೆ.

ರಫೀಕ್ ಅವರಿಗೆ ಸೇರಿದ ದುರ್ವೇಶ್ ಅಸೋಸಿಯೇಷನ್‌ನಲ್ಲಿ ಈ ಅವಘಡ ನಡೆದಿದೆ.  ಬಿಸ್ಕೆಟ್, ಚಾಕೊಲೇಟ್‌ ಮತ್ತಿತರ ತಿನಿಸು ವಸ್ತುಗಳು ಸುಟ್ಟು ಕರಕಲಾಗಿವೆ.

ರಫೀಕ್ ಒಂದೂವರೆ ವರ್ಷದಿಂದ ವಿವಿಧ ಕಂಪನಿಗಳ ತಂಪು ಪಾನೀಯಗಳು ಸೇರಿದಂತೆ ತಿನಿಸುಗಳ ಸಗಟು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಅಂಗಡಿಯ ಇರುವ ಮಹಡಿಯ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿತ್ತು. ಈ ಕಾರ್ಯಕ್ಕೆ ಬಂದವರು ಕಟ್ಟಡ ಮೇಲೆ ಮಲಗಿದ್ದರು. ಬೆಂಕಿ ಕಂಡ ತಕ್ಷಣ ಬಂದು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮೆಸ್ಕಾಂ, ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.